ಕಲಬುರಗಿ: ಪೊಲೀಸ್ ಭದ್ರತೆಯಲ್ಲಿ ‘ಸಾವರ್ಕರ್ ಮಾಫಿನಾಮ’ ನಾಟಕ ಪ್ರದರ್ಶನ

Update: 2023-02-10 16:13 GMT

ಕಲಬುರಗಿ:  ಮೈಸೂರು ರಂಗಾಯಣ ನಿರ್ನದೇಶಕ ಅಡ್ಡಂಡ ಕಾರ್ಯಪ್ಪ ನಿರ್ದೇಶನದ  'ಟಿಪ್ಪು ನಿಜ ಕನಸುಗಳು' ನಾಟಕ ಪ್ರದರ್ಶನದ ವಿರೋಧಿಸಿ ನಗರದ ಜಗತ್ ವೃತ್ತದಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ‘ಸಾವರ್ಕರ್ ಮಾಫಿನಾಮ’ ಬೀದಿ ನಾಟಕದ ದೃಶ್ಯವೊಂದನ್ನು ಪ್ರದರ್ಶನ ಮಾಡಿದರು.

''‘ಸಾವರ್ಕರ್ ಮಾಫಿನಾಮ’ ನಾಟಕ ಪ್ರದರ್ಶನಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ನಮಗೆ ಅನುಮತಿ ನೀಡಲಿಲ್ಲ'' ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಹೇಳಿದರು.

ನಾಟಕದ ದೃಶ್ಯದಲ್ಲಿ ಅಂಡಮಾನ್ ಜೈಲಿನಲ್ಲಿದ್ದ ಸಾವರ್ಕರ್ ಯಾವ ರೀತಿಯಲ್ಲಿ ಬ್ರಿಟಿಷರ ಮುಂದೆ ಮಂಡಿಯೂರಿದ್ದ. ಹಾಗೂ ಯಾವ ರೀತಿಯಲ್ಲಿ ಕ್ಷಮಾಪಣೆ ಪತ್ರ ಬರೆದಿದ್ದ ಎಂದು ತೋರಿಸಿಕೊಡಲಾಯಿತು.

ಈ ವೇಳೆ ಮಾತನಾಡಿದ ಕಾರ್ಯಕರ್ತರು, ''ಹಿಂದೂ-ಮುಸ್ಲಿಮರ ನಡುವೆ ಒಡಕು ಮೂಡಿಸುವ ಸಲುವಾಗಿ ಈ ಕೃತಿ ರಚಿಸಿದ್ದಾರೆ. ನಗರದ ಶಾಂತಿಯನ್ನು ಕೆಡಿಸುವ ಹುನ್ನಾರವನ್ನು ಮಾಡಲಾಗುತ್ತಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಆರ್ಎಸ್ಎಸ್ನ ಯಾವೊಂದು ನಾಯಿಯೂ ತನ್ನ ಜೀವ ಬಿಟ್ಟಿಲ್ಲ. ದೇಶದಲ್ಲಿ ಕೋಮು ದಳ್ಳುರಿ ಹೆಚ್ಚಿಸಲು ಕೋಮುವಾದಿಗಳು ಪ್ರಚೋದನೆ ಮಾಡುತ್ತಿದ್ದಾರೆ'' ಎಂದು ಹೇಳಿದರು.

ಹೋರಾಟಗಾರರಾದ ಕೆ.ನೀಲಾ, ಮೀನಾಕ್ಷಿ ಬಾಳಿ, ಅರ್ಜುನ ಭದ್ರೆ, ಜಗದೇವಿ ನೂಲಕರ್, ಗುಲಾಬೂರಾಣಿ, ಸುಧಾಮ ಧನ್ನಿ, ಮರೆಪ್ಪ ಹಳ್ಳಿ, ಮಲ್ಲಣ್ಣ ಮಸ್ಕಿ, ಮಲ್ಲಿಕಾರ್ಜುನ ಹಳ್ಳಿ, ಬಸವರಾಜ, ಪಾಂಡುರಂಗ ಮಾವಿನಕರ್, ಸಿದ್ರಾಮ, ಪ್ರಭು ಖಾನಾಪುರೆ, ಡಾ.ಅಶೋಕ, ಸಂಗಯ್ಯ ಎಸ್.ಹಳ್ಳದಮಠ, ಶರಣಬಸಪ್ಪ ಮಮಶೆಟ್ಟಿ ಇತರರಿದ್ದರು.

ಇದಕ್ಕೂ ಮುನ್ನ ಪಂಡಿತ ರಂಗ ಮಂದಿರದಲ್ಲಿ ನಡೆದ ಟಿಪ್ಪು ನಿಜಕನಸುಗಳು ನಾಟಕ ಪ್ರದರ್ಶನದಲ್ಲಿ ಸ್ವಾಮೀಜಿಗಳು ಹಾಗೂ ಗಣ್ಯರು ಭಾಗವಹಿಸಿದ್ದರು. ಶಾಸಕರಾದ ರಾಜಕುಮಾರ ಪಾಟೀಲ ತೆಲ್ಕೂರ, ಬಸವರಾಜ ಮತ್ತಿಮಡು ಸೇರಿದಂತೆ ಅನೇಕ ಗಣ್ಯರು ನಾಟಕ ವೀಕ್ಷಿಸಿದರು. 

ಮಾಧ್ಯಮದವರೊಂದಿಗೆ ಮಾತನಾಡಿದ ತೆಲ್ಕೂರ್, ನಿನ್ನೆ ಬೀದರ್ ನಲ್ಲಿ ಹೌಸ್ ಫುಲ್ ಪ್ರದರ್ಶನ ಇಂದು ಕಲಬುರಗಿ ಯಲ್ಲಿ ಕೂಡ ಹೌಸ್ ಫುಲ್ ಆಗಿದೆ. ವಿರೋಧ ಮಾಡುವವರು ಇನ್ನೊಂದೆರಡು ದಿನ ನಾಟಕ ಕಲಬುರಗಿಯಲ್ಲಿ ಪ್ರದರ್ಶನ ಮಾಡುವ ವ್ಯವಸ್ಥೆ ಬಗ್ಗೆ ಚರ್ಚಿಸಲಾಗುವುದು ಎಂದರು.

Similar News