ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇ ಟೋಲ್ ಶುಲ್ಕ 800 ರೂ.: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪ

Update: 2023-02-11 07:07 GMT

ಮೈಸೂರು: 'ಮಾರ್ಚ್ ಅಂತ್ಯದ ವೇಳೆಗೆ ತೆರೆಯಲಿರುವ ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇನಲ್ಲಿ  ಬೆಂಗಳೂರು ಮೈಸೂರು ಹೋಗಿ ಬರಲು 800 ರೂಪಾಯಿ ಟೋಲ್ ಕಟ್ಟಬೇಕಂತೆ. ಇಷ್ಟು ಟೋಲ್ ತೆಗೆದುಕೊಳ್ಳೋ ಅಗತ್ಯ ಏನಿದೆ? ಧಮ್ಮು ತಾಕತ್ತು ಬಗ್ಗೆ ಮಾತನಾಡುತ್ತಿರಿ, ಧಮ್ ಇದ್ರೆ ಜನರಿಗೆ ಫ್ರೀ ಟೋಲ್ ಮಾಡಿ' ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಸವಾಲು ಹಾಕಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಸಿದ್ದರಾಮಯ್ಯ ಸರ್ಕಾರ ಇದ್ದಾಗ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಮಾಡುವ ಕುರಿತು ಕೇಂದ್ರ ಒಪ್ಪಿಗೆ ಕೊಟ್ಟಿದೆ . 2018ರಲ್ಲಿ ಕಾಂಗ್ರೇಸ್ ಇದ್ದಾಗ ಹಣ ಬಿಡುಗಡೆಯಾಗಿದ್ದು. ಇದರಲ್ಲಿ ನಿಮ್ಮ ಸಾಧನೆ ಏನಿದೆ ಎಂದು ಪ್ರಶ್ನಿಸಿದ ಅವರು,  2 ಲಕ್ಷದ 48 ಸಾವಿರ ಹುದ್ದೆ ಕೊಟ್ಟಿದೀನಿ ಎಂದು ಹೇಳಿದ್ದೀರಿ ಯಾರಿಗೆ ಉದ್ಯೋಗ ಕೊಟ್ಟಿದ್ದೀರು ಹೇಳಿ. ಬಾಯಿ ಬಿಟ್ಟರೆ ಬರಿ ಸುಳ್ಳೇ ಹೇಳುತ್ತೀರಿ, ಸುಳ್ಳೇ ನಿಮ್ಮ ಮನೆ ದೇವರು' ಎಂದು ಕಿಡಿಕಾರಿದರು.  

''ಯುಪಿಎ ಆಡಳಿತದ ಅವಧಿಯಲ್ಲಿ 4 ಲೇನ್ ಮಾಡಿದ್ದನ್ನ ನೀವು ಎಕ್ಸ್​ಟ್ರಾ 6 ಲೇನ್ ಮಾಡಿದ್ದೀರ ಅಷ್ಟೇ. ಆದ್ರೆ ಅದಕ್ಕೆ ಸುಮಾರು 400 ರೂಪಾಯಿ ಚಾರ್ಜ್ ಮಾಡ್ತಿದ್ದೀರ. ನೀವೇನು ಪುಕ್ಸಟ್ಟೆ ಕೊಡ್ಸಿದ್ದೀರಾ?'' ಎಂದು ಸಂಸದ ಪ್ರತಾಪ್ ಸಿಂಹರನ್ನ ತರಾಟೆಗೆ ತೆಗೆದುಕೊಂಡಿದರು.

''ಸಿಟಿ ರವಿ ಅವರೇ ಜನರಿಗೆ  ಉತ್ತರ ಕೊಡಿ''

''ಸಿಟಿ ರವಿ ಅವರೇ ನನ್ನ ಮೇಲೆ ಮಾನನಷ್ಟ ಮೊಕದ್ದಮೆ ಹಾಕಿದ್ದೀರಿ. ಅದಕ್ಕೆ ಕೋರ್ಟಿನಲ್ಲಿ ಉತ್ತರ ಕೊಡ್ತೀನಿ. ಈಗ ನೀವು ಜನರಿಗೆ ಉತ್ತರ ಕೊಡಿ. ನಿಮ್ಮ ಬೀದಿಯ ಒಬ್ಬ ಟೀಚರ್ ಕೆ.ಆರ್.ಎಸ್ ನಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಗ್ಗೆ ಕುಮಾರಸ್ವಾಮಿ ಹೇಳಿದ್ದಾರೆ. ದಯಮಾಡಿ ಈ ಬಗ್ಗೆ ಮಾತನಾಡಿ ಕುಮಾರಸ್ವಾಮಿಗೆ ಉತ್ತರ ಕೊಡಿ. ಇದನ್ನು ನಾನು ಹೇಳುತ್ತಿಲ್ಲ ,ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. ಯಡಿಯೂರಪ್ಪ ಅವರನ್ನು ಖುರ್ಚಿಯಿಂದ ಇಳಿಸಲು ನಿಮ್ಮ ಪಾತ್ರ ಅಪಾರವಾದುದು. ಬಿಜೆಪಿ ಅಧಿಕಾರಕ್ಕೆ ಬರಲ್ಲ, ಆದರೂ ಇಬ್ಬರು ಟವೆಲ್ ಹಾಕಿ ಕಾಯುತ್ತಿದ್ದಾರೆ. ಒಬ್ಬರು ಸಂತೋಷ್, ಇನ್ನೊಬ್ಬರು ಜೋಶಿ ಈ ಬಗ್ಗೆನು ಉತ್ತರ ಕೊಡಿ. ಕಾಂಗ್ರೆಸ್ ಜೆಡಿಎಸ್ ಗೆ ಉತ್ತರ ಕೊಡದಿದ್ದರೂ ಪರವಾಗಿಲ್ಲ, ಜನಸಾಮಾನ್ಯರಿಗೆ ಉತ್ತರ ಕೊಡಿ' ಎಂದು ಸಿಟಿ ರವಿ ಅವರನ್ನ ಎಂ.ಲಕ್ಷ್ಮಣ್ ಆಗ್ರಹಿಸಿದರು.

Similar News