ಚೆಕ್‍ಬೌನ್ಸ್ ಪ್ರಕರಣ: ಮೂಡಿಗೆರೆ ಬಿಜೆಪಿ ಶಾಸಕ ಎಂ.ಪಿ. ಕುಮಾರಸ್ವಾಮಿಗೆ 4 ವರ್ಷ ಜೈಲು ಶಿಕ್ಷೆ

Update: 2023-02-13 14:20 GMT

ಚಿಕ್ಕಮಗಳೂರು, ಫೆ.13: ಚೆಕ್‍ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂಡಿಗೆರೆ ಕ್ಷೇತ್ರದ ಹಾಲಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರಿಗೆ 4 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.

ಶಾಸಕ ಕುಮಾರಸ್ವಾಮಿ ಅವರು ಎಚ್.ಆರ್.ಹೂವಪ್ಪಗೌಡ ಎಂಬವರಿಂದ 1.35 ಕೋ. ರೂ. ಸಾಲ ಪಡೆದುಕೊಂಡಿದ್ದು, ಈ ಹಣ ಪಾವತಿ ಸಂಬಂಧ ಶಾಸಕ ಕುಮಾರಸ್ವಾಮಿ ಅವರು 8 ಚೆಕ್‍ಗಳನ್ನು ನೀಡಿದ್ದರು. ಆದರೆ ಕುಮಾರಸ್ವಾಮಿ ಅವರು ನೀಡಿದ್ದ ಎಲ್ಲ ಚೆಕ್‍ಗಳು ಬೌನ್ಸ್ ಆಗಿದ್ದರಿಂದ ಸಾಲ ನೀಡಿದ್ದ ಹೂವಪ್ಪಗೌಡ ಅವರು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು.

ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜೆ.ಪ್ರೀತ್ ಅವರು ಸೋಮವಾರ ತೀರ್ಪು ಪ್ರಕಟಿಸಿದ್ದು, ಶಾಸಕ ಕುಮಾರಸ್ವಾಮಿ ಅವರ ಪ್ರತೀ ಚೆಕ್‍ಬೌನ್ಸ್ ಪ್ರಕರಣ ಸಂಬಂಧ ತಲಾ 6 ತಿಂಗಳುಗಳ ಕಾಲ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.

Similar News