×
Ad

ಕೋಲಾರ: ಚುನಾವಣಾ 'ವಾರ್ ರೂಮ್' ಉದ್ಘಾಟಿಸಿದ ಸಿದ್ದರಾಮಯ್ಯ

Update: 2023-02-13 21:02 IST

ಕೋಲಾರ, ಫೆ.13: ಮುಂಬರುವ 2023ರ ಕರ್ನಾಟಕ ವಿಧಾನಸಭಾ ಕ್ಷೇತ್ರದ ಚುನಾವಣೆ (karnataka election) ಹಿನ್ನೆಲೆ ಕೋಲಾರ ಮತ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು ಸ್ಪರ್ಧಿಸುವುದಾಗಿ ಘೋಷಿಸಿರುವ ಹಿನ್ನಲೆಯಲ್ಲಿ ಕೋಲಾರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಿದ್ದರಾಮಯ್ಯನವರ ಚುನಾವಣಾ ಯೋಜನೆ, ಪ್ರಚಾರದ ವಾರ್ ರೂಮ್ ಕಚೇರಿಯನ್ನು ಟೇಕಲ್ ರಸ್ತೆಯ ಸಮೃದ್ಧಿ ಲೇಔಟ್ ಸಮೀಪ ಸೋಮವಾರ ಉದ್ಘಾಟಿಸಿದರು‌.

ಮಾಜಿ ಸಭಾಪತಿ ವಿ.ಆರ್ ಸುದರ್ಶನ್, ಶಾಸಕ ಶ್ರೀನಿವಾಸ ಗೌಡ, ಹೆಬ್ಬಾಳ ಶಾಸಕ ಭೈರತಿ‌ ಸುರೇಶ್, ಮಾಜಿ ಸ್ಪೀಕರ್ ರಮೇಶ್ ಕುಮಾರ್, ಮಾಜಿ ವಿಧಾನ ಪರಿಷತ್ ಸದಸ್ಯ ನಜೀರ್ ಅಹ್ಮದ್, ಎಂ.ಆರ್ ಸೀತಾರಾಮ್ ಹಾಗೂ ಕೋಲಾರದ ಎಲ್ಲಾ ಕಾಂಗ್ರೆಸ್ ಪಕ್ಷದ ಸ್ಥಳೀಯ ನಾಯಕರು, ವಿವಿಧ ಸಮುದಾಯಗಳ ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಬೆಂಗಳೂರಿನ ಚುನಾವಣಾ ತಂತ್ರಗಾರಿಕೆ ತಂಡ 'ಪೋಲ್ ಹೌಸ್ ಕೋಲಾರ' ವಿಧಾನಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿ ವಹಿಸಿಕೊಂಡಿದ್ದು, ಮುಂದಿನ ಮೂರು ತಿಂಗಳು ಕೋಲಾರದ ವಾರ್ ರೂಮ್ ಅನ್ನು ನಿರ್ವಹಿಸಲಿದೆ.

Similar News