×
Ad

ರಾಜ್ಯದಲ್ಲಿ ಬಂಡೆ ಉರುಳುತ್ತೆ, ಹುಲಿಯಾ ಕಾಡಲ್ಲಿರುತ್ತೆ, ಬಿಜೆಪಿ ಅಧಿಕಾರಕ್ಕೆ ಬರುತ್ತೆ: ನಳಿನ್‌ ಕುಮಾರ್‌ ಕಟೀಲ್‌

Update: 2023-02-14 15:53 IST

ಕೂಡ್ಲಿಗಿ: 'ರಾಜ್ಯದಲ್ಲಿ ಬಂಡೆ ಉರುಳುತ್ತೆ, ಹುಲಿಯಾ ಕಾಡಲ್ಲಿರುತ್ತೆ. ಆ ಮೂಲಕ ಕಾಂಗ್ರೆಸ್‌ ನಿರ್ನಾಮ ಆಗಿ 2023ರಲ್ಲಿ ಬಿಜೆಪಿ ಪೂರ್ಣ ಬಹುಮತದೊಂದಿಗೆ ಮತ್ತೊಮ್ಮೆ ರಾಜ್ಯದಲ್ಲಿ ಅಧಿಕಾರ ಹಿಡಿಯಲಿದೆ' ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಭವಿಷ್ಯ ನುಡಿದಿದ್ದಾರೆ. 

ಕೊಪ್ಪಳ ತಾಲೂಕಿನ ಹಲಗೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಬಾದಾಮಿಯಲ್ಲಿ ನಿಲ್ಲಲಿ  ಇಲ್ಲವೇ ವರುಣಾ ಕ್ಷೇತ್ರದಲ್ಲಿ ನಿಲ್ಲಲಿ ಅವರನ್ನು ಸೋಲಿಸುತ್ತೇವೆ. ಆ ಕ್ಷೇತ್ರದಲ್ಲಿ ಸಿದ್ದರಾಮಯ್ಯ ನಿಂತು ನೋಡಲಿ. ಅವರನ್ನ ನಾವು ಸೋಲಿಸುತ್ತೇವೆ. ಅವರ ವಿರುದ್ದ ಯಾರನ್ನ ನಿಲ್ಲಿಸಬೇಕು ಎಂದು ನಮ್ಮ ಪಕ್ಷ ನಿರ್ಧಾರ ಮಾಡುತ್ತದೆ ಎಂದರು.

ಕೋಲಾರದಲ್ಲಿ ಸಿದ್ದರಾಮಯ್ಯ ಅವರನ್ನು ಓಡಿಸಿ ಕಳಿಸಿದ್ದಾರೆ. ಅಲ್ಲಿ ನಿಲ್ಲುವುದಿಲ್ಲ ಎಂದು ಅವರೇ ಹೇಳಿದ್ದಾರೆ. ಮುನಿಯಪ್ಪ ಕೋಪದಿಂದ ಕುಳಿತಿದ್ದಾರೆ. ಅಲ್ಲಿ ಅವರು ನಿಂತರೆ ನಾವಲ್ಲ, ಕಾಂಗ್ರೆಸ್ ನವರೇ ಸೋಲಿಸಿ ಕಳುಹಿಸುತ್ತಾರೆ ಎಂದರು.

Similar News