3 ವರ್ಷಗಳಲ್ಲಿ 3,573 ಮಂದಿ ರೈತರು ಆತ್ಮಹತ್ಯೆ | ಬಿಜೆಪಿ ಸರಕಾರದ ವಿರುದ್ಧ ರಣದೀಪ್ ಸಿಂಗ್ ಸುರ್ಜೇವಾಲಾ ಕಿಡಿ

'ವಾರ್ತಾಭಾರತಿ' ವಿಶೇಷ ವರದಿ ಟ್ವೀಟ್ ಮಾಡಿದ ಕಾಂಗ್ರೆಸ್ ನಾಯಕ

Update: 2023-02-15 12:56 GMT

ಬೆಂಗಳೂರು: ಬಿಜೆಪಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, (Randeep Surjewala) ''ರೈತರ ಆದಾಯ ಡಬಲ್ ಮಾಡ್ತೀವಿ ಎಂದು ಅಧಿಕಾರಕ್ಕೆ ಏರಿದವರು ರೈತರ ಸಾವನ್ನು ಡಬಲ್ ಮಾಡಿದರು'' ಎಂದು ಕಿಡಿಕಾರಿದ್ದಾರೆ. 

ರೈತರು ಆತ್ಮಹತ್ಯೆ  ಕುರಿತು 'ವಾರ್ತಾಭಾರತಿ'ಯಲ್ಲಿ ಬುಧವಾರ ಪ್ರಕಟವಾದ ವಿಶೇಷ ವರದಿ ಉಲ್ಲೇಖಿಸಿ ಟ್ವೀಟ್ ಮಾಡಿರುವ ಅವರು, ''ರೈತರ ಸಾವಿಗೆ BJP ಕೊಡುಗೆಗಳು ಬೆಂಬಲ ಬೆಲೆ ಕೊಡಲಿಲ್ಲ ಕಾರ್ಪೋರೇಟ್ ಅನುಕೂಲಿತ ಭೂ ಸುಧಾರಣೆ ಕಾಯ್ದೆ  ಕರಾಳ ಕೃಷಿ ಕಾಯ್ದೆ ಇಂಥ ರೈತವಿರೋಧಿ ಸರ್ಕಾರದಲ್ಲಿ ರೈತರ ಸಾವು ಏರಿಕೆಯಾಗದೆ ಇನ್ನೇನೂ ರೈತರ ಬದುಕು ಬಂಗಾರವಾದೀತೆ?'' ಎಂದು ಪ್ರಶ್ನೆ ಮಾಡಿದ್ದಾರೆ.  

ರೈತರ ಆತ್ಮಹತ್ಯೆ; ಕರ್ನಾಟಕಕ್ಕೆ 2ನೇ ಸ್ಥಾನ: 

ಪಿಎಂ ಕಿಸಾನ್, ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆ ಸೇರಿದಂತೆ ಇನ್ನಿತರ ಯೋಜನೆಗಳು ಜಾರಿಗೊಂಡ ನಂತರವೂ ದೇಶದಾದ್ಯಂತ ಕಳೆದ ಮೂರು ವರ್ಷಗಳಲ್ಲಿ ಒಟ್ಟಾರೆ 16,854 ಮತ್ತು  ಕರ್ನಾಟಕದಲ್ಲಿ ಕಳೆದ ಮೂರು ವರ್ಷಗಳಲ್ಲಿ 3,573 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಇದನ್ನೂ ಓದಿ; ರೈತರ ಆತ್ಮಹತ್ಯೆ: ಕರ್ನಾಟಕಕ್ಕೆ 2ನೇ ಸ್ಥಾನ, ಮೂರು ವರ್ಷಗಳಲ್ಲಿ 3,573 ಮಂದಿ ರೈತರು ಆತ್ಮಹತ್ಯೆ

Similar News