×
Ad

ಬೆಂಗಳೂರು | ಸಾಲದ ಹೆಸರಿನಲ್ಲಿ ವಂಚನೆ ಪ್ರಕರಣ: ಆ್ಯಪ್ ಆಧರಿತ ಕಂಪೆನಿಗಳ ಮೇಲೆ ಈಡಿ ದಾಳಿ, 29.5 ಕೋಟಿ ರೂ. ಜಪ್ತಿ

Update: 2023-02-15 17:14 IST

ಬೆಂಗಳೂರು, ಫೆ.14: ಲಾಭಾಂಶ ನೀಡುವುದಾಗಿ ಗ್ರಾಹಕರಿಂದ ಹೂಡಿಕೆ ಮಾಡಿಸಿ ವಂಚಿಸುತ್ತಿದ್ದ ಆ್ಯಪ್ ಆಧರಿತ ಕಂಪೆನಿಗಳ ಮೇಲೆ ಜಾರಿ ನಿರ್ದೇಶನಾಲಯ (ಈಡಿ) ದಾಳಿ ನಡೆಸಿ ವಿವಿಧ ಬ್ಯಾಂಕ್ ಖಾತೆಗಳಲ್ಲಿದ್ದ 29.5 ಕೋಟಿ ರೂ ಜಪ್ತಿ ಮಾಡಿದೆ.

ಕ್ರಿಪ್ಟೊ ಕರೆನ್ಸಿಯ ಮೇಲೆ ಹೂಡಿಕೆ ಮಾಡಿದರೆ ಲಾಭಾಂಶ, ಸಾಲ ಸೇರಿದಂತೆ ವಿವಿಧ ಆಮಿಷ ನೀಡಿ ಗ್ರಾಹಕರಿಂದ ಹಣ ಹೂಡಿಕೆ ಮಾಡಿಸುತ್ತಿದ್ದ ಕೆಲ ವಂಚಕ ಕಂಪೆನಿಗಳು ಬಳಿಕ ಹೂಡಿಕೆದಾರರ ಸದಸ್ಯತ್ವ ರದ್ದುಗೊಳಿಸಿ ವಂಚಿಸುತ್ತಿದ್ದ ಆರೋಪ ಕೇಳಿ ಬಂದಿತ್ತು. 

ಈ ಸಂಬಂಧ ಎಚ್‍ಪಿ ಝೆಡ್ ಟೋಕನ್ ಕಂಪೆನಿಯ ವಿರುದ್ಧ ನಾಗಾಲ್ಯಾಂಡ್‍ನ ಕೋಹಿಮಾ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದರಂತೆ ಬುಧವಾರ ರಾಜಧಾನಿ ಬೆಂಗಳೂರು, ಮುಂಬೈ, ಹೊಸದಿಲ್ಲಿಯ ಗುಗಾರ್ಂವ್, ಮತ್ತು ಸೇಲಂನ ವಿವಿಧೆಡೆ ನಡೆದ ದಾಳಿ ನಡೆಸಿದ ಅಧಿಕಾರಿಗಳು ಶೋಧಕಾರ್ಯ ಕೈಗೊಂಡರು. 

ಇನ್ನೂ, 2012ನೆ ಸಾಲಿನಲ್ಲಿ 9.82 ಕೋಟಿ ರೂಪಾಯಿ ಜಪ್ತಿ ಮಾಡಿ, ತನಿಖೆ ಕೈಗೊಂಡಿತ್ತು.

Similar News