ಮೈಸೂರು ವಿವಿ ಹಂಗಾಮಿ ಕುಲಪತಿಯಾಗಿ ಪ್ರೊ.ಮುಝಫ್ಫರ್ ಅಸ್ಸಾದಿ ನೇಮಕ
Update: 2023-02-15 22:19 IST
ಮೈಸೂರು,ಫೆ.15: ಮೈಸೂರು ವಿಶ್ವವಿದ್ಯಾನಿಲಯದ ಹಂಗಾಮಿ ಕುಲಪತಿಯಾಗಿ ರಾಜ್ಯಶಾಸ್ತ್ರ ವಿಭಾಗದ ಡೀನ್ ಪ್ರೊ.ಮುಝಫ್ಫರ್ ಅಸ್ಸಾದಿಯವರನ್ನು ನೇಮಕ ಮಾಡಿ ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ಆದೇಶ ಹೊರಡಿಸಿದ್ದಾರೆ.
ಮೈಸೂರು ವಿಶ್ವವಿದ್ಯಾನಿಲಯದ ಹಂಗಾಮಿ ಕುಲಪತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಪ್ರೊ.ಎಚ್.ರಾಜಶೇಖರ್ ಅವರ ಅವಧಿಯು ಫೆ.19ಕ್ಕೆ ಅಂತ್ಯವಾಗಲಿದ್ದು, ಈ ಹಿನ್ನೆಲೆಯಲ್ಲಿ ನೂತನ ಹಂಗಾಮಿ ಕುಲಪತಿಯಾಗಿ ರಾಜ್ಯಶಾಸ್ತ್ರ ವಿಭಾಗದ ಡೀನ್ ಪ್ರೊ.ಮುಝಫ್ಫರ್ ಅಸ್ಸಾದಿ ಅವರನ್ನು ನೇಮಕ ಮಾಡಿ, ರಾಜ್ಯಪಾಲರು ಆದೇಶಿಸಿದ್ದಾರೆ.
ಪ್ರೊ. ರಾಜಶೇಖರ್ ಅವರ ಅವಧಿಯು ಫೆ.19ಕ್ಕೆ ಅಂತ್ಯವಾಗಲಿದೆ. ಆದರೆ, ಶನಿವಾರ ಮತ್ತು ರವಿವಾರ ಸರ್ಕಾರಿ ರಜಾ ದಿನವಾಗಿರುವ ಕಾರಣ ಪ್ರೊ.ಮುಝಫ್ಫರ್ ಅಸ್ಸಾದಿ ಶುಕ್ರವಾರ (ಫೆ.17)ರಂದು ಅಧಿಕಾರ ಸ್ವೀಕರಿಸುವಂತೆ ರಾಜ್ಯಪಾಲ ಥಾವರ್ ಚಂದ್ ಗೆಹೋಟ್ ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.