×
Ad

ಕಲಬುರಗಿ: ಮಲಗಿದ್ದ ವೇಳೆ ತಲೆ ಮೇಲೆ ಕಲ್ಲು ಎತ್ತಿಹಾಕಿ ಪತಿಯಿಂದ ಪತ್ನಿಯ ಹತ್ಯೆ

Update: 2023-02-16 16:10 IST

ಕಲಬುರಗಿ, ಫೆ.16: ಇಲ್ಲಿನ ಅಂಬಿಕಾ ಕಾಲೋನಿಯಲ್ಲಿ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಅಂಬಿಕಾ ನಗರದಲ್ಲಿ ವರದಿಯಾಗಿದೆ. 

ಮೃತರನ್ನು ಫರೀದಾ ಬೇಗಂ (39)  ಎಂದು ಗುರುತಿಸಲಾಗಿದೆ.

ಫರಿದಾ ಬೇಗಂರನ್ನು 13 ವರ್ಷದ ಹಿಂದೆ ಮದುವೆಯಾಗಿದ್ದ ಎಜಾಝ್ ಅಹ್ಮದ್, ಆಕೆ ಮೇಲೆ ಅನುಮಾನ ಪಡುತ್ತಿದ್ದ, ಅಲ್ಲದೇ ಆಕೆ ವರದಕ್ಷಿಣೆ ಕಿರುಕುಳದ ಸುಳ್ಳು ಆರೋಪ ಮಾಡಿದ್ದಾಳೆ ಎಂದು ಮಲಗಿದ್ದಾಗ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿದ್ದಾನೆ ಎಂದು ಹೇಳಲಾಗಿದೆ. 

ಇಬ್ಬರೂ ಸರಕಾರಿ ಶಾಲೆಯ ಶಿಕ್ಷ ಕರಾಗಿದ್ದು, ಅನುಮಾನದಿಂದಾಗಿ ಪತ್ನಿ ಫರಿದಾರನ್ನು ಶಾಲೆಗೂ ಹೋಗದಂತೆ ಹೇಳುತ್ತಿದ್ದ ಎನ್ನಲಾಗಿದೆ. ಈ ಸಂಬಂಧ ಸ್ಟೇಷನ್ ಬಝಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Similar News