2021ನೆ ಸಾಲಿನ ವಿವಿಧ ದತ್ತಿ ಪ್ರಶಸ್ತಿಗಳಿಗೆ 49 ಕೃತಿಗಳ ಆಯ್ಕೆ: ಮಹೇಶ್ ಜೋಶಿ

Update: 2023-02-16 17:46 GMT

ಬೆಂಗಳೂರು, ಫೆ.16: ಕಸಾಪ 2021ನೆ ಸಾಲಿನ ವಿವಿಧ ದತ್ತಿಗಾಗಿ 49 ವಿಭಾಗಕ್ಕೆ 49 ಕೃತಿಗಳನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮಾರ್ಚ್ 12ರಂದು ಪರಿಷತ್ತಿನ ಆವರಣದಲ್ಲಿರುವ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಸಾಪ ಅಧ್ಯಕ್ಷ ಮಹೇಶ್ ಜೋಶಿ ತಿಳಿಸಿದ್ದಾರೆ.

2021ರ ಜನವರಿಯಿಂದ ಡಿಸೆಂಬರ್ ಅಂತ್ಯದೊಳಗೆ ಪ್ರಕಟಗೊಂಡ ಕೃತಿಗಳನ್ನು 2021ನೇ ಸಾಲಿನ ವಿವಿಧ ದತ್ತಿ ಪ್ರಶಸ್ತಿಗೆ ಆಯ್ಕೆಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯ, ಅಂತರರಾಜ್ಯ ಹಾಗೂ ಅಂತರ ರಾಷ್ಟ್ರಗಳಿಂದ ಸುಮಾರು 2ಸಾವಿರಕ್ಕೂ ಹೆಚ್ಚು ಕೃತಿಗಳನ್ನು ಲೇಖಕರು ಹಾಗೂ ಪ್ರಕಾಶಕರು ಸಾಹಿತ್ಯ ಪರಿಷತ್ತಿಗೆ ಕಳಿಸಿಕೊಟ್ಟಿದ್ದರು. ಪ್ರಸ್ತುತ 2021ನೆಯ ಸಾಲಿನ ವಿವಿಧ ದತ್ತಿ ಪ್ರಶಸ್ತಿಗಳ ಆಯ್ಕೆಗಾಗಿ ಕಳಿಸಿರುವ ಕೃತಿಗಳನ್ನು ನೋಡಿದಾಗ ಸಾಹಿತ್ಯ ಕ್ಷೇತ್ರದಲ್ಲಿ ಇದೊಂದು ಉತ್ತಮ ಬೆಳವಣಿಗೆ. ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ರೀತಿಯಲ್ಲಿ  ಮಹತ್ವದ ಕೊಡುಗೆ ನೀಡುತ್ತಿರುವ ಲೇಖಕರಿಗೆ ಕನ್ನಡ ಸಾಹಿತ್ಯ ಪರಿಷತ್ತು ಅಭಿನಂದಿಸಿ ಅವರ ಸಾಹಿತ್ಯ ಸೇವೆ ನಿರಂತರವಾಗಿರಲಿ ಎಂದು ಅವರು ಆಶಿಸಿದರು.

ಕನ್ನಡ ಸಾರಸ್ವತ ಲೋಕಕ್ಕೆ ಲೇಖಕರು ನೀಡುತ್ತಿರುವ ಕೊಡುಗೆ ಅಪಾರವಾಗಿದೆ. 2021ನೆ ಸಾಲಿನ ದತ್ತಿ ಪ್ರಶಸ್ತಿಗಾಗಿ ಬಂದಿರುವ ಎಲ್ಲ್ಲ ಕೃತಿಗಳು ತಮ್ಮದೇ ಆದ ರೀತಿಯ ಗುಣಮಟ್ಟವನ್ನು ಹೊಂದಿದ್ದು. ದತ್ತಿ ಪ್ರಶಸ್ತಿಯ ಆಶಯವನ್ನು ಗಮನದಲ್ಲಿ ಇಟ್ಟುಕೊಂಡು ಕೂಲಂಕುಶ ಪರಿಶೀಲನೆಯ ನಂತರವೇ ಕೃತಿಗಳ ಆಯ್ಕೆಯನ್ನು ಮಾಡಲಾಗಿದೆ. ದತ್ತಿ ಪ್ರಶಸ್ತಿಗಳ ನಗದು ಗರಿಷ್ಠ 10ಸಾವಿರ ರೂ.ಗಳಿಂದ ಕನಿಷ್ಠ 250ರೂ. ಗಳ ವರೆಗೆ ವ್ಯಾಪಿಸಿದೆ. ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ರೀತಿಯಲ್ಲಿ ಕೊಡುಗೆ ನೀಡುತ್ತಿರುವ ಲೇಖಕರುಗಳನ್ನು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪರಿಷತ್ತಿನಲ್ಲಿ ದತ್ತಿ ಹಣವನ್ನು ಇಡುವ ಮೂಲಕ ಸಾಹಿತ್ಯ ಸೇವೆ ಮಾಡುವ ದತ್ತಿ ದಾನಿಗಳನ್ನು ಕಸಾಪ ಗೌರವ ಪೂರ್ವಕವಾಗಿ ನೆನೆಸಿಕೊಳ್ಳುತ್ತಿದೆ ಎಂದು ಜೋಶಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ. 

Similar News