×
Ad

ರಾಜ್ಯ ಬಜೆಟ್ 2023 | 'ಕಿವಿ ಮೇಲೆ ಹೂವು' ಅಭಿಯಾನ ಆರಂಭಿಸಿದ ಕಾಂಗ್ರೆಸ್

Update: 2023-02-17 14:51 IST

ಬೆಂಗಳೂರು: ಪ್ರಣಾಳಿಕೆ ಮತ್ತು ಕಳೆದ ಬಜೆಟ್ ನ 10% ಭರವಸೆಗಳನ್ನೂ ಈಡೇರಿಸದ ಬಿಜೆಪಿ ಮತ್ತೊಂದು ಸುಳ್ಳು ಭರವಸೆಯ ಬಜೆಟ್ ಮೂಲಕ ಜನತೆಯ ಕಿವಿ ಮೇಲೆ ಮತ್ತೊಂದು ಹೂವು ಇಟ್ಟಿದೆ ಎಂದು ಆರೋಪಿಸಿ ಕಿವಿ ಮೇಲೆ ಹೂವು ಇಟ್ಟುಕೊಂಡೇ ಅಧಿವೇಶನಕ್ಕೆ ಬರುವ ಮೂಲಕ ಕಾಂಗ್ರೆಸ್ ನಾಯಕರು ಸಾಂಕೇತಿಕ ಪ್ರತಿಭಟನೆ ನಡೆಸಿದರು. 

ಅಲ್ಲದೇ,  ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ #KiviMeleHoova ಹ್ಯಾಶ್ ಟ್ಯಾಗ್ ನಡಿಯಲ್ಲಿ ಅಭಿಯಾನ ಆರಂಭಿಸಿರುವ  ಕಾಂಗ್ರೆಸ್, ' ವಿವಿಧ ಸಮುದಾಯಗಳ ಮೀಸಲಾತಿ ಹೆಚ್ಚಳದ ಭರವಸೆ ನೀಡಿತ್ತು ಬಿಜೆಪಿ. ಆದರೆ ಆ ನಿಟ್ಟಿನಲ್ಲಿ ಸಣ್ಣ ಪ್ರಯತ್ನವನ್ನೂ ಮಾಡದೆ ಜನರ ಕಿವಿ ಮೇಲೆ ಹೂವಿಟ್ಟಿದೆ. ಹೀಗಿರುವಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಂಡಲ್ ಬಜೆಟ್ ನಂಬಿಕೆಗೆ ಅರ್ಹವೇ?' ಎಂದು ಪ್ರಶ್ನೆ ಮಾಡಿದೆ. 

''ಮಹಿಳೆಯರಿಗೆ ಸ್ಮಾರ್ಟ್ ಫೋನ್ ನೀಡುತ್ತೇವೆ ಎಂದಿದ್ದ ಬಿಜೆಪಿ''

'ಮಹಿಳೆಯರಿಗೆ ಸ್ತ್ರೀ ಉನ್ನತಿ ನಿಧಿ ಸ್ಥಾಪಿಸುತ್ತೇವೆ, ಸ್ಮಾರ್ಟ್ ಫೋನ್ ನೀಡುತ್ತೇವೆ ಎಂದಿತ್ತು ಬಿಜೆಪಿ. ಅದ್ಯಾವ ಭರವಸೆಗಳೂ ಈಡೇರಿಲ್ಲ. ಹೀಗಿರುವಾಗ ಬೊಮ್ಮಾಯಿ ಅವರು ನಾಮಕಾವಸ್ಥೆಗೆ ಓದುತ್ತಿರುವ ಬಜೆಟ್‌ನಲ್ಲಿ ನಿರೀಕ್ಷೆ ಇಟ್ಟುಕೊಳ್ಳುವಂತಹ ಮೂರ್ಖತನ ಮತ್ತೊಂದಿಲ್ಲ' ಎಂದು ಕಾಂಗ್ರೆಸ್  ಕಿಡಿಕಾರಿದೆ. 

Similar News