×
Ad

ರಾಜ್ಯದಲ್ಲಿ 1,316 ಅನಧಿಕೃತ ಶಾಲೆಗಳು ಪತ್ತೆ!

Update: 2023-02-17 20:29 IST

ಬೆಂಗಳೂರು, ಫೆ.17: ರಾಜ್ಯದಲ್ಲಿ ಒಟ್ಟು 1,316 ಅನಧಿಕೃತ ಶಾಲೆಗಳು ಪತ್ತೆಯಾಗಿದ್ದು, ಈ ಎಲ್ಲ ಖಾಸಗಿ ಶಾಲೆಗಳು ಕರ್ನಾಟಕ ಶಿಕ್ಷಣ ಕಾಯ್ದೆ ನಿಯಮಗಳನ್ನು ಉಲ್ಲಂಘನೆ ಮಾಡಿವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯು ಸಮೀಕ್ಷೆಯನ್ನು ನಡೆಸಿ ವರದಿಯನ್ನು ಪ್ರಕಟಿಸಿದೆ. 

83 ಖಾಸಗಿ ಶಾಲೆಗಳು ಅನುಮತಿಯನ್ನೇ ಪಡೆದಿಲ್ಲ. 74 ಶಾಲೆಗಳು ನೋಂದಣಿ ಮಾಡಿದೆ ಉನ್ನತೀಕರಿಸಿದ ತರಗತಿಗಳನ್ನು ನಡೆಸುತ್ತಿವೆ. 95 ಖಾಸಗಿ ಶಾಲೆಗಳು ರಾಜ್ಯ ಪಠ್ಯಕ್ರಮವನ್ನು ಬೋಧನೆಗೆ ಅನುಮತಿಯನ್ನು ಪಡೆದು, ಅನ್ಯ ಪಠ್ಯವನ್ನು ಬೋಧಿಸುತ್ತಿವೆ. 294 ಶಾಲೆಗಳು ಅನುಮತಿ ಪಡೆದಿರುವ ಮಾಧ್ಯಮದಲ್ಲಿ ಬೋಧಿಸದೇ, ಬೇರೆ ಮಾಧ್ಯಮದಲ್ಲಿ ಬೋಧನೆ ಮಾಡುತ್ತಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

620 ಶಾಲೆಗಳು ಅನಧಿಕೃತವಾಗಿ ಹೆಚ್ಚುವರಿ ವಿಭಾಗಗಳನ್ನು ಹೊಂದಿದೆ. 141 ಶಾಲೆಗಳನ್ನು ಅನುಮತಿಯಿಲ್ಲದೆ ಸ್ಥಳಾಂತರಿಸಲಾಗಿದೆ. 8 ಶಾಲೆಗಳನ್ನು ಅನುಮತಿ ಪಡೆಯದೆ ಸ್ಥಳಾಂತರಿಸಲಾಗಿದೆ. ಕೇಂದ್ರ ಪಠ್ಯಕ್ರಮಕ್ಕೆ ಸಂಯೋಜನೆ ಹೊಂದಿದ ನಂತರ ಅನಧಿಕೃತವಾಗಿ ಅದೇ ಕಟ್ಟಡದಲ್ಲಿ ರಾಜ್ಯ ಪಠ್ಯದಲ್ಲಿ ಮುಂದುವರೆಸುತ್ತಿರುವ 21 ಶಾಲೆಗಳು ರಾಜ್ಯದಲ್ಲಿವೆ ಎಂದು ಉಲ್ಲೇಖಿಸಲಾಗಿದೆ.

Similar News