×
Ad

ರೂಪಾ - ರೋಹಿಣಿ ಸಿಂಧೂರಿ ಜಟಾಪಟಿ | ಮೋದಿ, ಅಮಿತ್‌ ಶಾಗೆ ಜಗ್ಗೇಶ್ ಮಾಡಿದ ಮನವಿ ಏನು?

Update: 2023-02-21 11:45 IST

ಬೆಂಗಳೂರು, ಫೆ. 21: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ.ರೂಪಾ ನಡುವಿನ ಜಟಾಪಟಿ ಇದೀಗ ಬೀದಿಗೆ ಬಂದಿದೆ. ಈ ನಡುವೆ ರೂಪಾ ಮತ್ತು ರೋಹಿಣಿ ಸಿಂಧೂರಿ ಅವರಿಗೆ ಸಲಹೆ ನೀಡುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್‌ ಅವರು ಟ್ವಿಟರ್‌ ಮೂಲಕ ಮನವಿ ಮಾಡಿದ್ದಾರೆ. 

'ಐಪಿಎಸ್‌ ಮತ್ತು ಐಎಎಸ್ ಜನರಿಗೆ ಮಾರ್ಗದರ್ಶನ ನೀಡುವ ಜವಾಬ್ದಾರಿಯುತ ಹುದ್ದೆಗಳಾಗಿದ್ದು, ಸರ್ಕಾರದೊಂದಿಗೆ ಸೇತುವೆಯಂತೆ ಕೆಲಸ ಮಾಡುತ್ತವೆ! ವೈಯಕ್ತಿಕ ದ್ವೇಷವನ್ನು ಮಾಧ್ಯಮಗಳ ಮುಂದೆ ತರಬಾರದು. ಸಾರ್ವಜನಿಕವಾಗಿ ಘನತೆ ಉಳಿಸುವಂತೆ ರೂಪಾ ಐಪಿಎಸ್‌ ಮತ್ತು ರೋಹಿಣಿ ಸಿಂಧೂರಿ ಅವರಿಗೆ ಸಲಹೆ ನೀಡಬೇಕೆಂದು ನಾನು ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರಲ್ಲಿ ವಿನಂತಿಸುತ್ತೇನೆ' ಎಂದು ಟ್ವೀಟರ್ ನಲ್ಲಿ ಬರೆದುಕೊಂಡಿರುವ ಜಗ್ಗೇಶ್ ಅವರು, ಈ ಟ್ವೀಟ್ ಅನ್ನು ಪ್ರಧಾನಿ ಮೋದಿ, ಅಮಿತ್‌ ಶಾ ಮತ್ತು ಡಿ. ರೂಪಾ, ರೋಹಿಣಿ ಸಿಂಧೂರಿ ಅವರಿಗೆ ಟ್ಯಾಗ್‌ ಮಾಡಿದ್ದಾರೆ. 

ರಾಜ್ಯ ಸರಕಾರಕ್ಕೆ ಮುಜುಗರ: ನೋಟಿಸ್ ಜಾರಿ

ಅಧಿಕಾರಿಗಳಿಬ್ಬರ ಬಹಿರಂಗ ಜಗಳದಿಂದ ತೀವ್ರ ಮುಜುಗರಕ್ಕೆ ಸಿಲುಕಿರುವ ರಾಜ್ಯ ಸರಕಾರ, ಇಬ್ಬರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ. ಇನ್ನು ಮುಂದೆ ಮಾಧ್ಯಮಗಳ ಮುಂದೆ ಹೋಗಬಾರದು ಎಂದು ರಾಜ್ಯ ಸರ್ಕಾರದಿಂದ ಇಬ್ಬರಿಗೂ ನೋಟಿಸ್ ಜಾರಿ ಮಾಡಲಾಗಿದೆ. 

ಇದನ್ನೂ ಓದಿ: ಪರೇಶ್​ ಮೇಸ್ತಾ ಸಾವು ಪ್ರಕರಣ: 122 ಜನರ ವಿರುದ್ಧ ದಾಖಲಾಗಿದ್ದ ಕೇಸ್ ಹಿಂಪಡೆಯಲು ಸಂಪುಟ ಸಭೆಯಲ್ಲಿ ತೀರ್ಮಾನ

Similar News