×
Ad

ಕಲಬುರಗಿ | ಚಿಂಚೋಳಿ ನಿಲ್ದಾಣದಲ್ಲಿ ನಿಲ್ಲಿಸಿದ್ದ ಕೆಎಸ್ಸಾರ್ಟಿಸಿ ಬಸ್ ಕಳವು

Update: 2023-02-21 12:55 IST

ಕಲಬುರಗಿ: ಇಲ್ಲಿನ ಚಿಂಚೋಳಿ ಪಟ್ಟಣದ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಕೆಎಸ್ಸಾರ್ಟಿಸಿ (KSRTC) ಬಸ್ ಕಳವಾದ ಘಟನೆ ಸೋಮವಾರ ತಡರಾತ್ರಿ ವರದಿಯಾಗಿದೆ. 

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ‌ಸಂಸ್ಥೆಗೆ ಸೇರಿದ ಬೀದರ್ ಬಸ್ ಡಿಪೋ 2ಕ್ಕೆ ಸೇರಿದ ಸರ್ಕಾರಿ ಬಸ್ಸನ್ನು ತೆಗೆದುಕೊಂಡು ಹೋಗಿದ್ದಾರೆನ್ನಲಾಗಿದ್ದು, ಕೃತ್ಯದ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. 

ಸ್ಥಳಕ್ಕೆ ಚಿಂಚೋಳಿ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಸದ್ಯ ಬಸ್ ಹುಡುಕಾಟದ ಸಲುವಾಗಿ ಎರಡು ತಂಡಗಳನ್ನು ರಚನೆ ಮಾಡಲಾಗಿದೆ ಎಂದು ತಿಳಿದು ಬಂದದೆ.

Similar News