ಕಲಬುರಗಿ | ಚಿಂಚೋಳಿ ನಿಲ್ದಾಣದಿಂದ ಕಳ್ಳತನವಾಗಿದ್ದ ಸರ್ಕಾರಿ ಬಸ್ ಪತ್ತೆ ಹಚ್ಚಿದ ಪೊಲೀಸರು
Update: 2023-02-21 18:36 IST
ಕಲಬುರಗಿ, ಫೆ.21: ಇಲ್ಲಿನ ಚಿಂಚೋಳಿ ಪಟ್ಟಣದ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಕೆಕೆಆರ್ಟಿಸಿಗೆ ಸೇರಿದ್ದ ಬಸ್ ಇಂದು ನುಸುಕಿನ 3 ಗಂಟೆ ಸುಮಾರಿಗೆ ಕಳ್ಳತನವಾಗಿತ್ತು. ಈ ಘಟನೆ ನಡೆದ ಹದಿಮೂರು ಗಂಟೆಯಲ್ಲಿ ಚಿಂಚೋಳಿ ಪೊಲೀಸರು ತೆಲಂಗಾಣ ರಾಜ್ಯದ ತಾಂಡೂರು ತಾಲೂಕಿನ ಭೂಕೈಲಾಸ ಗ್ರಾಮದಲ್ಲಿ ಪತ್ತೆ ಹಚ್ಚಿರುವುದಾಗಿ ವರದಿಯಾಗಿದೆ.
ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡ ಚಿಂಚೋಳಿ ಠಾಣೆ ಪೊಲೀಸರು ಘಟನೆ ನಡೆದು ಹದಿಮೂರು ಗಂಟೆಯಲ್ಲಿ ತೆಲಂಗಾಣ ರಾಜ್ಯದ ತಾಂಡೂರು ತಾಲೂಕಿನ ಭೂ ಕೈಲಾಸ ತಾಂಡಾದಲ್ಲಿ ಬಸ್ ಅನ್ನು ಪತ್ತೆ ಹಚ್ಚಿದ್ದಾರೆ. ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬೀದರ್ ಬಸ್ ಡಿಪೋ 2ಕ್ಕೆ ಸೇರಿದ ಸರ್ಕಾರಿ ಬಸ್ಸನ್ನು ತಂಡವೊಂದು ಸೋಮವಾರ ತಡರಾತ್ರಿ ತೆಗೆದುಕೊಂಡು ಹೋಗಿದ್ದು, ಕೃತ್ಯದ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.