ಚಿರತೆ ಸೆರೆ ಹಿಡಿದು ಅಭಯಾರಣ್ಯಗಳಿಗೆ ಸ್ಥಳಾಂತರ ಮಾಡಲು ಕ್ರಮ: ಸಚಿವ ಮಾಧುಸ್ವಾಮಿ

Update: 2023-02-21 16:09 GMT

ಬೆಂಗಳೂರು, ಫೆ, 21: ‘ರಾಜ್ಯದಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಚಿರತೆ ದಾಳಿ ಪ್ರಕರಣಗಳನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಿದ್ದು, ಚಿರತೆಗಳನ್ನು ಜೀವಂತವಾಗಿ ಸೆರೆಹಿಡಿದು ಅಭಯಾರಣ್ಯಗಳಿಗೆ ಸ್ಥಳಾಂತರ ಮಾಡಲು ಕ್ರಮ ಕೈಗೊಳ್ಳಲಾಗುವುದು’ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.

ಮಂಗಳವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್ ಸದಸ್ಯ ರವೀಂದ್ರ ಶ್ರೀಕಂಠಯ್ಯ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಕಾನೂನು ಪ್ರಕಾರ ಚಿರತೆಗಳನ್ನು ಕೊಲ್ಲಲ್ಲು ಅವಕಾಶವಿಲ್ಲ. ವನ್ಯಜೀವಿ ದಾಳಿಗೊಳಗಾಗಿ ಮೃತಪಟ್ಟ ಕುಟುಂಬ ಸದಸ್ಯರಿಗೆ ನೀಡುವ ಪರಿಹಾರ ಮೊತ್ತ ದ್ವಿಗುಣಗೊಳಿಸಲಾಗಿದೆ. 2019 ರಿಂದ 22ರ ವರೆಗೆ ಒಟ್ಟು 410 ಪ್ರಕರಣಗಳು ದಾಖಲಾಗಿದ್ದು, 28.87 ಲಕ್ಷ ರೂ.ಪರಿಹಾರ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

Similar News