ಬೇಲೂರು ಪುರಸಭೆಯ ನೂತನ ಅಧ್ಯಕ್ಷರಾಗಿ ತೀರ್ಥಕುಮಾರಿ ವೆಂಕಟೇಶ್ ಆಯ್ಕೆ

Update: 2023-02-22 09:37 GMT

ಬೇಲೂರು:  ಬೇಲೂರು ಪುರಸಭೆಯಲ್ಲಿ ಕಳೆದ ಹದಿನೈದು ದಿನಗಳ ಹಿಂದೆ ಸಿ. ಎನ್ ದಾನಿ ಅವರಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಇಂದು ನಡೆದ ಪುರಸಭೆ ಅಧ್ಯಕ್ಷ  ಚುನಾವಣೆಯಲ್ಲಿ 7 ನೇ ವಾರ್ಡಿನ  ಕಾಂಗ್ರೆಸ್ ಸದಸ್ಯೆ ತೀರ್ಥ ಕುಮಾರಿ ವೆಂಕಟೇಶ್ ಅವರು ಆಯ್ಕೆಯಾದರು.

ತೀರ್ಥ ಕುಮಾರಿ ಅವರು ಇಂದು ಬೆಳಿಗ್ಗೆ 9.30ಕ್ಕೆ ನಾಮಪತ್ರ ಸಲ್ಲಿಸಿದ್ದರು.12 ಗಂಟೆಗೆ ನಿಗದಿಪಡಿಸಲಾಗಿದ್ದ ಚುನಾವಣೆ ಸಮಯವನ್ನು ಚುನಾವಣಾಧಿಕಾರಿ ತಹಶೀಲ್ದಾರ್ ರಮೇಶ್ ಅವರು ಕಾರಣಾಂತರಗಳಿಂದ 1.00 ಗಂಟೆಗೆ ಮುಂದೂಡಿದರು. ಒಂದು ಗಂಟೆಗೆ ನಡೆದ ಚುನಾವಣೆ ವೇಳೆ ಒಂದೇ ನಾಮಪತ್ರ ಇದ್ದ ಕಾರಣ ತೀರ್ಥ ಕುಮಾರಿ ವೆಂಕಟೇಶ್ ಅವರನ್ನು ಅವಿರೋಧ ಆಯ್ಕೆ ಎಂದು ತಹಶೀಲ್ದಾರ್ ಅವರು ಘೋಷಣೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷೆ ತೀರ್ಥ ಕುಮಾರಿ ವೆಂಕಟೇಶ್,  'ನನಗೆ  ಸಹಕರಿಸಿದ ನನ್ನ ವಾರ್ಡಿನ ಎಲ್ಲಾ ಮತದಾರರಿಗೆ ಹಾಗೂ ಕಾಂಗ್ರೆಸ್ ಪಕ್ಷದ ಎಲ್ಲಾ ಸದಸ್ಯರಿಗೆ ಹಾಗೂ ರಾಜ್ಯದ ಹಿರಿಯ ನಾಯಕರಿಗೆ ಮತ್ತು ಎಲ್ಲಾ ಕಾರ್ಯಕರ್ತರಿಗೆ ಅಭಿನಂದನೆಗಳು. ಹಾಗೂ ಬೇಲೂರು ಪಟ್ಟಣದ ಸಮಗ್ರ ಅಭಿವೃದ್ಧಿಗೆ ಹಾಗೂ ನಗರದ 23 ವಾರ್ಡುಗಳ ಸಾರ್ವಜನಿಕರಿಗೆ ಸಿಗುವಂತ ಮೂಲಭೂತ ಸೌಕರ್ಯ ಗಳಾದ ಕುಡಿಯುವ ನೀರು. ಬೀದಿ ದೀಪ.ರಸ್ತೆ .ಚರಂಡಿ. ಸ್ವಚ್ಛತೆಗೆ ಪ್ರಮುಖ ಆದ್ಯತೆ ಒದಗಿಸಲು ಎಲ್ಲಾ ಸದಸ್ಯರ ಸಹಕಾರದೊಂದಿಗೆ ಮುಂದಾಗುತ್ತೇನೆ' ಎಂದರು.

ಇದೇ ಸಂದರ್ಭ ಮಾಜಿ ಸಚಿವ ಬಿ ಶಿವರಾಂ. ಮಾಜಿ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಮ್ ಆರ್. ವೆಂಕಟೇಶ್. ಪುರಸಭೆ ಉಪಾಧ್ಯಕ್ಷ  ಉಷ್ ಸತೀಶ್. ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ತೌಫಿಕ್. ಪುರಸಭಾ ಸದಸ್ಯ ಜಿ ಶಾಂತಕುಮಾರ್. ಜಮಾಲುದ್ದೀನ್. ಅಕ್ರಮ್. ಭರತ್. ದಿವ್ಯ ಗಿರೀಶ್. ಜಗದೀಶ್. ಪ್ರಭಾಕರ್. ಶ್ರೀನಿವಾಸ್. ಪಯಾಜ್. ಅಶೋಕ್. ಕಾಂಗ್ರೆಸ್ ತಾಲೂಕು ಅಧ್ಯಕ್ಷ ಏಮ್.ಜೇ. ನಿಶಾಂತ್. ಗ್ರಾಮ ಪಂಚಾಯಿತಿ ಸದಸ್ಯ ಕೋಳಿ ಶಿವು. ರಂಗನಾಥ್. ಸೇರಿದಂತೆ ಇತರರು ಹಾಜರಿದ್ದರು.

Similar News