ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಸಿ.ಟಿ ರವಿ ಭೇಟಿ ವಿಚಾರ: ಇದೊಂದು ವಿವಾದವೇ ಅಲ್ಲ ಎಂದ ಸಿದ್ದರಾಮಯ್ಯ

Update: 2023-02-22 18:29 GMT

ಬಾಗಲಕೋಟೆ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಉತ್ತರ ಕನ್ನಡ ಜಿಲ್ಲೆಯ ಪ್ರವಾಸದ ವೇಳೆ ಭಟ್ಕಳದ ಶಿರಾಲಿಯಲ್ಲಿ ಶಾಸಕ ಸುನೀಲ್ ನಾಯ್ಕ್ ಅವರ ಮನೆಯಲ್ಲಿ ಮಾಂಸದೂಟ ಸೇವಿಸಿ ನಾಗಬನ ಮತ್ತು ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ಎಂಬ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಚರ್ಚೆಗೆ ಕಾರಣವಾಗಿದೆ.

ಈ ವಿಚಾರವಾಗಿ ಬಾಗಲಕೋಟೆ ಜಿಲ್ಲೆಯ ಹುನಗುಂದದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, ''ದೇವಸ್ಥಾನಕ್ಕೆ ಹೋಗೋದು, ಹೋಗದೇ ಇರುವುದು, ಮಾಂಸ ತಿನ್ನೊದು ತಿನ್ನದೇ ಇರುವದು ವಿವಾದವೇ ಅಲ್ಲ'' ಎಂದು ಹೇಳಿದರು. 

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಫೋಟೋ

''ಜನರ ಸಮಸ್ಯೆಗಳು, ನಾಡಿನ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಬೇಕು. ನಾನು ಈಗಾಗಲೇ ಬಿಜೆಪಿಗರಿಗೆ ನಾವು ಚರ್ಚೆ ಮಾಡಲು ತಯಾರಿದ್ದೇವೆ. ನೀವು ತಯಾರಿದ್ದೀರಾ ಎಂದು ಕೇಳಿದ್ದೇನೆ'' ಎಂದು ಸಿದ್ದರಾಮಯ್ಯ ಹೇಳಿದರು. 

''ಈ ನಾಡಿನ ರೈತರಿಗೆ,ಬಡವರಿಗೆ  ಏನು ಮಾಡಿದೀರಿ ಅಂತ ಅವರು ಹೇಳಬೇಕು ಎಂದು ಬಿಜೆಪಿಗರಿಗೆ ಪ್ರಶ್ನೆ ಮಾಡಿದರು.ಜನರ ಸಮಸ್ಯೆಗಳನ್ನು ಬಗೆ ಹರಿಸುವದನ್ನು ಬಿಟ್ಟು. ನಾಮ(ತಿಲಕ) ಹಾಕಿಕೊಳ್ಳುವದು ದೇವಸ್ಥಾನಕ್ಕೆ ಹೋಗುವದು, ಟಿಪ್ಪು ಸುಲ್ತಾನ್, ಗಾಂಧಿ , ಗೋಡ್ಸೆ, ಸಾವರ್ಕಕರ್ ಬಗ್ಗೆ ಮಾತನಾಡುವದು ಇವೆಲ್ಲ ರಿಲೆವೆಂಟ್ ವಿಷಯಗಳಲ್ಲ'' ಎಂದು ಸಿದ್ದರಾಮಯ್ಯ ತಿಳಿಸಿದರು. 

Similar News