ಬೆಳಗಾವಿ | ಕಮಿಷನ್ ಕಿರುಕುಳಕ್ಕೆ ಬೇಸತ್ತು ಗ್ರಾ.ಪಂ ಸದಸ್ಯೆ ರಾಜೀನಾಮೆ

Update: 2023-02-23 05:59 GMT

ಬೆಳಗಾವಿ: ಗ್ರಾಮ ಪಂಚಾಯತ್ ಸದಸ್ಯೆಯೊಬ್ಬರು ಕಮಿಷನ್ ಕಿರುಕುಳಕ್ಕೆ ಬೇಸತ್ತು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಘಟನೆ ಜಿಲ್ಲೆಯ ರಾಯಬಾಗ ತಾಲೂಕಿನ ಮೇಖಳಿ ಗ್ರಾಮದಲ್ಲಿ ವರದಿಯಾಗಿದೆ.

'ಗ್ರಾಮದ ಅಭಿವೃದ್ಧಿ ಕಾಮಗಾರಿಯ ಅನುದಾನಗಳಿಗೆ  ಅನುಮೋದನೆ ತೆಗೆದುಕೊಳ್ಳುವುದಕ್ಕೆ ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಅಧಿಕಾರಗಳಿಗೆ ಕಮಿಷನ್ ಕೊಡಬೇಕಾಗುತ್ತೆ ಎಂದು ಹೇಳಿ ಅಭಿವದ್ಧಿ ಅಧಿಕಾರಿ ಮಂಜುನಾಥ ದಳವಾಯಿ ಪ್ರತಿ ಸದಸ್ಯರಿಗೆ ಕಮಿಷನ್ ನೀಡುವಂತೆ ಒತ್ತಾಯಿಸುತ್ತಿದ್ದಾರೆ' ಎಂದು ಸದಸ್ಯೆ ಸುಧಾ ಸಿದ್ದಪ್ಪ ರಾಜಂಗಳೆ ಆರೋಪಿಸಿದ್ದಾರೆ.

ಅಧಿಕಾರಿಗಳು ಬೇಡಿಕೆ ಇಟ್ಟಿರುವ ಅಷ್ಟೊಂದು ಹಣ ಕೊಡುವದಕ್ಕೆ ನನಗೆ ಸಾಧ್ಯವಾಗುತ್ತಿಲ್ಲ ಎಂದು ಸುಧಾ ಸಿದ್ದಪ್ಪ ರಾಜಂಗಳೆ ಅವರು ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. 

Similar News