ಶಿಕ್ಷಣ ಪಡೆದವರು ಹೆಚ್ಚಿದ್ದರೂ, ಅಪರಾಧ ತಗ್ಗಿಲ್ಲ: ಗೃಹ ಸಚಿವ ಆರಗ ಜ್ಞಾನೇಂದ್ರ ಬೇಸರ

Update: 2023-02-23 15:27 GMT

ಬೆಂಗಳೂರು, ಫೆ.23: ಸಮಾಜದಲ್ಲಿ ಶಿಕ್ಷಣ ಪಡೆದವರ ಸಂಖ್ಯೆ ಅಧಿಕವಾಗಿದ್ದರೂ, ಅಪರಾಧ ಪ್ರಮಾಣ ತಗ್ಗುತ್ತಿಲ್ಲ.ದುರಾದೃಷ್ಟವಶಾತ್ ಅಪರಾಧ ಪ್ರಕರಣ ಹೆಚ್ಚಾಗುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಬೇಸರ ವ್ಯಕ್ತಪಡಿಸಿದರು.

ಗುರುವಾರ ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆ ಕಾಂಗ್ರೆಸ್ ಸದಸ್ಯ ಪುಟ್ಟರಂಗಶೆಟ್ಟಿ ಪರವಾಗಿ ನರೇಂದ್ರ ಕೇಳಿದ ಪ್ರಶ್ನೆ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅಪರಾಧಗಳ ಪ್ರಮಾಣ ಏರಿಕೆಯಾಗುತ್ತಿದೆ. ಅದಕ್ಕೆ ತಕ್ಕಂತೆ ಪೊಲೀಸ್ ಠಾಣೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಆದರೂ, ಅಪರಾಧ ಹೆಚ್ಚಾಗುತ್ತಿದೆ ಎಂದರು.

ಈ ವೇಳೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಹೌದು, ನಮ್ಮ ಶಿಕ್ಷಣದ ಪ್ರಭಾವ ಇದು ಎಂದು ಬೇಸರ ಹೊರ ಹಾಕಿದರು. ಅಪರಾಧ ಹೆಚ್ಚಾದರೆ ಕಾರಾಗೃಹ ಸಹ ಜಾಸ್ತಿ ಮಾಡಿ ಎಂದು ಇದೇ ಸಂದರ್ಭದಲ್ಲಿ ಸ್ಪೀಕರ್ ಸಲಹೆ ನೀಡಿದರು. 

ಬಳಿಕ ಸಚಿವರು, ಇತಿಹಾಸದಲ್ಲೇ ಮೊದಲ ಬಾರಿಗೆ ಗೃಹ ಇಲಾಖೆಗೆ ಯಾವುದೇ ಸರಕಾರಗಳು ಕೊಡದಷ್ಟು ಅನುದಾನವನ್ನು ನಮ್ಮ ಸರಕಾರ ಕೊಟ್ಟಿದೆ. 200 ಕೋಟಿ ರೂ. ವೆಚ್ಚದಲ್ಲಿ 117 ಪೊಲೀಸ್ ಠಾಣೆ ತೆರೆಯಲಾಗಿದೆ. ಪೊಲೀಸರಿಗೆ ನಿವೇಶನ, ವಸತಿ ಸೇರಿದಂತೆ ಇತ್ಯಾದಿ ಸೌಲಭ್ಯ ಒದಗಿಸಲಾಗಿದೆ. ಶಿವಮೊಗ್ಗದಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಸೆಂಟ್ರಲ್ ಜೈಲ್ ನಿರ್ಮಿಸಲಾಗುತ್ತಿದೆ. 8 ಸೆಂಟ್ರಲ್ ಜೈಲಿರುವ ಕಡೆ ಹೆಚ್ಚುವರಿಯಾಗಿ ಶೆಲ್‍ಗಳನ್ನುನಿರ್ಮಿಸಲಾಗುವುದುಎಂದು ಭರವಸೆ ನೀಡಿದರು.

Similar News