ಗಗನಚುಕ್ಕಿ-ಭರಚುಕ್ಕಿ ಅಭಿವೃದ್ಧಿ; 'ರೋಪ್ ವೇ' ನಿರ್ಮಾಣ ಮಾಡಲು ಕ್ರಮ: ಸಚಿವ ಸುನಿಲ್ ಕುಮಾರ್
Update: 2023-02-23 21:08 IST
ಬೆಂಗಳೂರು, ಫೆ.23: ಕಾವೇರಿ ಕಣಿವೆಯ ಪ್ರಸಿದ್ಧ ತಾಣವಾದ ಗಗನಚುಕ್ಕಿ -ಭರಚುಕ್ಕಿ ಪ್ರವಾಸ ತಾಣದ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗುವುದು ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಹೇಳಿದ್ದಾರೆ.
ಗುರುವಾರ ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್ ಸದಸ್ಯ ಅನ್ನದಾನಿ ಕೇಳಿದ ಪ್ರಶ್ನೆಗೆ ಪ್ರವಾಸೋದ್ಯಮ ಸಚಿವರ ಪರವಾಗಿ ಉತ್ತರ ನೀಡಿದ ಅವರು, ಮಳವಳ್ಳಿ ತಾಲೂಕು ವ್ಯಾಪ್ತಿಯಲ್ಲಿ ಬರುವ ಪ್ರವಾಸಿ ತಾಣವಾದ ಗಗನಚುಕ್ಕಿ-ಭರಚುಕ್ಕಿಗೆ ಸಂಪರ್ಕ ಕಲ್ಪಿಸಲು ರೋಪ್ ವೇ ನಿರ್ಮಾಣ ಮಾಡಲು ಕ್ರಮ ವಹಿಸಲಾಗುವುದು ಎಂದರು.
2022-23ನೆ ಸಾಲಿನ ಆಯವ್ಯಯದಲ್ಲಿ 20 ಕೋಟಿ ರೂ., ಹೆಚ್ಚುವರಿ ಅನುದಾನ 20 ಕೋಟಿ ರೂ. ಒಟ್ಟು 40 ಕೋಟಿ ರೂ.ಅನುದಾನವನ್ನು ಮುಂದುವರೆದ ಕಾಮಗಾರಿಗಳಿಗೆ ಪ್ರಗತಿಗನುಗುಣವಾಗಿ ಬಿಡುಗಡೆ ಮಾಡಲಾಗಿದೆ. ಅನುದಾನದ ಕೊರತೆಯಿಂದ ನೂತನ ಕಾಮಗಾರಿಗಳನ್ನು ಕೈಗೆತ್ತಿಕೊಂಡಿರುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.