'ಮಂದಿರ, ಮಸೀದಿ ನಿರ್ಮಾಣ ಸರಕಾರದ ಕೆಲಸವಲ್ಲ': ರಾಮನಗರದಲ್ಲಿ ಮಂದಿರ ನಿರ್ಮಾಣಕ್ಕೆ ಬಿಜೆಪಿ ಸದಸ್ಯರಿಂದಲೇ ಆಕ್ಷೇಪ
ಬೆಂಗಳೂರು: ರಾಮನಗರದ ರಾಮದೇವರ ಬೆಟ್ಟದಲ್ಲಿ ಉದ್ದೇಶಿತ ರಾಮ ಮಂದಿರ ನಿರ್ಮಾಣಕ್ಕೆ ಬಿಜೆಪಿ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಆಕ್ಷೇಪ ಎತ್ತಿದ್ದಾರೆ.
ಗುರುವಾರ ವಿಧಾನ ಪರಿಷತ್ ನಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ''ಆಯವ್ಯಯದಲ್ಲಿ ರಾಮನಗರದಲ್ಲಿ ರಾಮ ಮಂದಿರ ನಿರ್ಮಿಸುವುದಾಗಿ ಘೋಷಿಸಲಾಗಿದೆ. ರಾಮ ನಿರ್ಮಾಣ ಮಾಡುವುದು ಸರಕಾರದ ಕೆಲಸವಲ್ಲ, ಬೇಕಿದ್ದರೆ ಜನರು ನಿರ್ಮಾಣ ಮಾಡಿಕೊಳ್ಳಲಿ. ಜನರ ಕಲ್ಯಾಣ ಕಾರ್ಯ ಕೈಗೊಳ್ಳುವುದಷ್ಟೇ ಪ್ರಜಾ ಪ್ರಭುತ್ವದ ಆಶಯ'' ಎಂದು ಹೇಳಿದರು.
''ಅರಣ್ಯ ಇಲಾಖೆಯಲ್ಲಿ ಕಾಡಿಚ್ಚು ನಂದಿಸಲು ಆಧುನಿಕ ಸಾಧನಗಳಿಲ್ಲ. ಈಗಲೂ ದಿನಗೂಲಿ ಸಿಬ್ಬಂದಿ ಸೊಪ್ಪು ಹಿಡಿದು ಬೆಂಕಿ ನಂದಿಸುತ್ತಿ ದ್ದಾರೆ. ಇಲಾಖೆಗೆ ಮೊದಲು ಸೌಕರ್ಯ ಮಂದಿರ ಕಲ್ಪಿಸಬೇಕು'' ಎಂದು ಒತ್ತಾಯಿಸಿದರು.
''ರಾಮದೇವರ ಬೆಟ್ಟ ಐತಿಹಾಸಿಕವಾಗಿದ್ದು, ಅಲ್ಲಿ ನೂತನ ರಾಮಮಂದಿರ ನಿರ್ಮಾಣವಾಗಬೇಕೆಂಬುದು ಹಲವರ ಆಶಯವಾಗಿತ್ತು. ನನ್ನ ಪ್ರಕಾರ ಯಾರೂ ಇದಕ್ಕೆ ವಿರೋಧ ಮಾಡುವುದಿಲ್ಲ. ವಿರೋಧ ಮಾಡುವವರು ವಿರೋಧಿಸಲಿ. ನನ್ನ ತಕಾರಾರಿಲ್ಲ'' ಎಂದು ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿಕೆ ನೀಡಿದ್ದರು.
ಬಿಜೆಪಿಯ ನೀತಿಗಳು ಬಿಜೆಪಿಯವರಿಗೇ ಅಪಥ್ಯ: ಕಾಂಗ್ರೆಸ್ ಟೀಕೆ
''ಬಿಜೆಪಿಯ ನೀತಿಗಳು ಬಿಜೆಪಿಯವರಿಗೇ ಅಪಥ್ಯವಾಗಿದೆ. ಜನ ಕಲ್ಯಾಣದ ಬದಲು "ಪ್ರೊಪೆಗಂಡಾ ಕಲ್ಯಾಣ" ಯೋಜನೆಗೆ ಮುಂದಾದ ಬಿಜೆಪಿ ನಡೆಯನ್ನು ವಿರೋಧಿಸಿದ್ದಾರೆ. ಅರಣ್ಯ ಇಲಾಖೆಯ ಅವ್ಯವಸ್ಥೆಯನ್ನು ಬಯಲಿಗಿಟ್ಟಿದ್ದಾರೆ. ಬಿಜೆಪಿಗೆ ಕನಿಷ್ಠ ಮಾನ ಮರ್ಯಾದೆ ಇದ್ದರೆ ಅವರದ್ದೇ ಪಕ್ಷದವರ "ಮನ್ ಕಿ ಬಾತ್" ಕೇಳಿಸಿಕೊಳ್ಳಲಿ'' ಎಂದು ವಿಪಕ್ಷ ಕಾಂಗ್ರೆಸ್ ಟ್ವೀಟ್ ಮಾಡಿದೆ.
ಬಿಜೆಪಿಯ ನೀತಿಗಳು ಬಿಜೆಪಿಯವರಿಗೇ ಅಪಥ್ಯವಾಗಿದೆ.
— Karnataka Congress (@INCKarnataka) February 24, 2023
ಜನ ಕಲ್ಯಾಣದ ಬದಲು "ಪ್ರೊಪೆಗಂಡಾ ಕಲ್ಯಾಣ" ಯೋಜನೆಗೆ ಮುಂದಾದ @BJP4Karnataka ನಡೆಯನ್ನು ವಿರೋಧಿಸಿದ್ದಾರೆ.
ಅರಣ್ಯ ಇಲಾಖೆಯ ಅವ್ಯವಸ್ಥೆಯನ್ನು ಬಯಲಿಗಿಟ್ಟಿದ್ದಾರೆ.
ಬಿಜೆಪಿಗೆ ಕನಿಷ್ಠ ಮಾನ ಮರ್ಯಾದೆ ಇದ್ದರೆ ಅವರದ್ದೇ ಪಕ್ಷದವರ "ಮನ್ ಕಿ ಬಾತ್" ಕೇಳಿಸಿಕೊಳ್ಳಲಿ.#BJPvsBJP pic.twitter.com/k8OkGDOOW2