×
Ad

ಬೆಲೆ ಏರಿಕೆ ಎಂದು ಬೊಬ್ಬೆ ಹೊಡೆಯುವ ಕಾಂಗ್ರೆಸಿಗರು ಪಾಕಿಸ್ತಾನ ನೋಡಿ: ನಟಿ ತಾರಾ

''ಇಡೀ ವಿಶ್ವವೇ ಭಾರತದ ಕಡೆ ತಿರುಗಿ ನೋಡುತ್ತಿರುವುದಕ್ಕೆ ಮೋದಿ ಆಡಳಿತ ಕಾರಣ''

Update: 2023-02-25 19:33 IST

ಚಿತ್ರದುರ್ಗ: ''ಇಡೀ ಪ್ರಪಂಚ ಭಾರತದ ಕಡೆ ತಿರುಗಿ ನೋಡುತ್ತಿದೆ ಎಂದರೆ ಅದಕ್ಕೆ ನಮ್ಮ ಪ್ರಧಾನಿ ಮೋದಿರವರ ಪಾರದರ್ಶಕ ಆಡಳಿತ ಕಾರಣ'' ಎಂದು ಅರಣ್ಯ ನಿಗಮದ ಅಧ್ಯಕ್ಷೆ ನಟಿ ತಾರ ಅಭಿಪ್ರಾಯಪಟ್ಟರು

ಹೊರವಲಯ ಚಂದ್ರವಳ್ಳಿ ಮೈದಾನದಲ್ಲಿ ಶನಿವಾರ ನಡೆದ ಬಿಜೆಪಿ.ಜಿಲ್ಲಾ ಮಹಿಳಾ ಮೋರ್ಚಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, 'ಸಮರ್ಥ ನಾಯಕತ್ವವುಳ್ಳ ಪ್ರಧಾನಿ ಮೋದಿ ಸರ್ಕಾರ ದೇಶ ಆಳುತ್ತಿರುವುದಕ್ಕೆ ನಾವುಗಳೆಲ್ಲಾ ಹೆಮ್ಮೆ ಪಡಬೇಕು' ಎಂದು ಶ್ಲಾಘಿಸಿದರು. 

ನರೇಂದ್ರಮೋದಿ ಎರಡನೇ ಅವಧಿಗೆ ದೇಶದ ಪ್ರಧಾನಿಯಾಗಿ ವಿಶ್ವದ ಬಲಿಷ್ಠ ದೇಶಗಳಲ್ಲಿ ಭಾರತವನ್ನು ಮೂರನೇ ಸ್ಥಾನಕ್ಕೆ ಕೊಂಡೊಯ್ದಿದ್ದಾರೆ. ಪೆಟ್ರೋಲ್, ಡೀಸೆಲ್, ಗ್ಯಾಸ್, ಚಿನ್ನದ ಬೆಲೆ ಜಾಸ್ತಿಯಾಗಿದೆ ಎಂದು ಕಾಂಗ್ರೆಸ್‍ನವರು ಬೊಬ್ಬೆ ಹೊಡೆಯುತ್ತಿದ್ದಾರೆ. ಚೀನಾ, ಬಾಂಗ್ಲಾದೇಶ, ಶ್ರೀಲಂಕಾ ಇನ್ನು ಅನೇಕ ನೆರೆಯ ರಾಷ್ಟ್ರಗಳು ಅದೋಗತಿಗೆ ಹೋಗಿವೆ ಎನ್ನುವ ಅರಿವು ಅವರಿಗೇಕಿಲ್ಲ ಎಂದು ಪ್ರಶ್ನಿಸಿದ ಅವರು,  ಭಾರತದಲ್ಲಿರುವ ಪ್ರತಿಯೊಬ್ಬರ ಜೀವನವನ್ನು ಮೋದಿ ಅವರು ಗಟ್ಟಿಗೊಳಿಸಿ ನೆಮ್ಮದಿ ನೆಲೆಸುವಂತೆ ಮಾಡಿದ್ದಾರೆಂದು ಹೇಳಿದರು. 

ಬಿ.ಎಸ್.ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಅನೇಕ ಸವಾಲುಗಳನ್ನು ಎದುರಿಸಿ ಎಲ್ಲವನ್ನು ಮೆಟ್ಟಿ ನಿಂತರು. ಅಂತಃಕರಣವಿರುವ ಪಕ್ಷ ಯಾವುದಾದರೂ ಇದ್ದರೆ ಅದು ಬಿಜೆಪಿ. ಕೇಂದ್ರ ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳನ್ನು ಜನರಿಗೆ ಕೊಟ್ಟಿವೆ. ಕೇವಲ ನಮ್ಮ ದೇಶವಷ್ಟೇ ಅಲ್ಲ ಬೇರೆ ಬೇರೆ ರಾಷ್ಟ್ರಗಳಲ್ಲಿ ಸಂಕಷ್ಟದಲ್ಲಿರುವ ಹೆಣ್ಣು ಮಕ್ಕಳಿಗೂ ಮೋದಿ ನೆರವಿನ ಹಸ್ತ ಚಾಚಿದ್ದಾರೆ ಎಂದರು. 

Similar News