×
Ad

ಕುಮಾರಸ್ವಾಮಿ ಮೊದಲು ತಮ್ಮ ಕುಟುಂಬ ಸರಿಮಾಡಿಕೊಳ್ಳಲಿ: ಪ್ರಹ್ಲಾದ್ ಜೋಶಿ

Update: 2023-02-26 17:35 IST

ಬೆಂಗಳೂರು: ‘ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಕುಟುಂಬದ ಎಲ್ಲ ಸದಸ್ಯರಿಗೂ ಟಿಕೆಟ್ ಕೊಟ್ಟರೂ ಅವರಲ್ಲಿ ಬಡೆದಾಟ ಸಾಮಾನ್ಯ. ಮೊದಲು ಕುಟುಂಬ ಸರಿ ಮಾಡಿಕೊಳ್ಳಲಿ. ಆಮೇಲೆ ರಾಜ್ಯದ ಅಳ್ವಿಕೆ ಮಾಡಲು ಬರಲಿ’ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿರುಗೇಟು ನೀಡಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಕುಮಾರಸ್ವಾಮಿ ಅವರು ಮೊದಲು ಮನೆಯನ್ನು ನಿಬಾಯಿಸಲಿ. ಕುಟುಂಬದ 10ರಿಂದ 12 ಮಂದಿ ಚುನಾವಣೆಯಲ್ಲಿ ನಿಂತರೂ ಅವರಿಗೆ ಸಮಾಧಾನವಿಲ್ಲ. ಹಾಗಿದ್ದ ಮೇಲೂ ಬಡಿದಾಡುತ್ತಾರೆ. ಕುಟುಂಬವನ್ನೆ ನಿರ್ವಹಿಸಲಾಗದವರು ರಾಜ್ಯವನ್ನು ಹೇಗೆ ನಿಭಾಯಿಸುತ್ತಾರೆ ಎಂದು ಹೇಳಿದ್ದಾರೆ.

‘9 ವರ್ಷಗಳಿಂದ ತೃತೀಯ ಶಕ್ತಿ ಒಂದಾಗಿಸುವ ಪ್ರಯತ್ನ ನಡೆಯುತ್ತಿದೆ. ಅವರಲ್ಲಿ ಒಗ್ಗಟ್ಟು ಮತ್ತು ಸ್ಪಷ್ಟ ಉದ್ದೇಶವಿಲ್ಲ. ಈ ಸರ್ಕಸ್ಸಿನಲ್ಲಿ ಭಾಗಿಯಾಗಿರುವ ಎಲ್ಲ ವಿಪಕ್ಷಗಳ ನಾಯಕರಿಗೆ ‘ನಾನು ಏನಾದರೂ ಮಾಡಿ ಪ್ರಧಾನಿ ಆಗಬೇಕು' ಎಂದ ಸ್ವಾರ್ಥವಿದೆ. ಅದೇ ಉದ್ದೇಶಕ್ಕಾಗಿ ಅವರ ನಡುವೆ ಬಡಿದಾಟ ನಡೆದಿದೆ. ತೃತೀಯ ಅಂದರೆ ಥರ್ಡ್‍ಕ್ಲಾಸ್ ಫ್ರಂಟ್ ಆಗಲಿದೆ' ಎಂದು ಜೋಶಿ ಲೇವಡಿ ಮಾಡಿದರು.

Similar News