ಕೊಳ್ಳೇಗಾಲ: ಅಕ್ರಮವಾಗಿ ಅಂಬರ್ ಗ್ರೀಸ್ ಕಳ್ಳ ಸಾಗಣೆ ಮಾಡುತ್ತಿದ್ದ ನಾಲ್ವರ ಬಂಧನ

Update: 2023-02-26 17:43 GMT

ಕೊಳ್ಳೇಗಾಲ: ಅಕ್ರಮವಾಗಿ ಅಂಬರ್ ಗ್ರೀಸ್ ಕಳ್ಳ ಸಾಗಣೆ ಮಾಡುತ್ತಿದ್ದ ಆರೋಪದಲ್ಲಿ ನಾಲ್ವರನ್ನು ಬಂಧಿಸಿರುವ ಕೊಳ್ಳೇಗಾಲ ಅರಣ್ಯ ಸಂಚಾರಿದಳ ಪೊಲೀಸರು 14 ಕೆಜಿ 950 ಗ್ರಾಂ ಅಂಬರ್ ಗ್ರೀಸ್ (ತಿಮಿಂಗಲ ವಾಂತಿ)ಯನ್ನು ವಶಪಡಿಸಿಕೊಂಡಿದ್ದಾರೆ.

ಕೇರಳದ ನಾದಪುರಂ ಸಂಶುದ್ದೀನ್ ಓತಿಯೋಲ್ (48) ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ವಿರೂಪಾಕ್ಷ (62) ಕೇರಳದ ಚಂಗಸೇರಿ ಗ್ರಾಮದ ತ್ರಸಿಮ ವರ್ಗಸೆ ಸುಜಾ, ಕೇರಳದ ಕಿಲುಪ್ತಲ್ಲಿಕರ್ ಗ್ರಾಮದ ಸಜ್ಜಿ ಸುಭಾಷ್(41) ಬಂಧಿತ ಆರೋಪಿಗಳು.

ಪಟ್ಟಣದ ಹೊಸ ಬಸ್ ನಿಲ್ದಾಣದ ಹೋಟೆಲ್ ಬಳಿ ಆರೋಪಿಗಳು ಕಾರಿನಲ್ಲಿ ಅಕ್ರಮವಾಗಿ ಅಂಬರ್ ಗ್ರೀಸ್ ( ತಿಮಿಂಗಲ ವಾಂತಿ ) ಯನ್ನು ಕಳ್ಳ ಸಾಗನೆ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಕೊಳ್ಳೇಗಾಲ ಅರಣ್ಯ ಸಂಚರಿದಳ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ದಾಳಿಯಲ್ಲಿ ಅರಣ್ಯ ಸಂಚಾರಿ ದಳದ ಆರಕ್ಷಕ ಉಪನಿರೀಕ್ಷಕ ವಿಜಯರಾಜು ಸಿಬ್ಬಂದಿಗಳಾದ ಬಸವರಾಜು, ರಾಮಚಂದ್ರ, ಸ್ವಾಮಿ ಶಂಕರ ಪ್ರಭಾಕರ ಬಸವರಾಜು ಭಾಗವಹಿಸಿದ್ದರು.

ನಂತರ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಧೀಶರು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.

Similar News