×
Ad

VIDEO- ಬೆಳಗಾವಿಯಲ್ಲಿ ಪ್ರಧಾನಿ ಮೋದಿ ರೋಡ್‌ ಶೋ

Update: 2023-02-27 15:48 IST

ಬೆಳಗಾವಿ: ಬೆಳಗಾವಿ ಸಾಂಬ್ರಾ ಏರ್​ಪೋರ್ಟ್​ ನಿಂದ ನಗರದ ಕೆಎಸ್‌ಆರ್‌ಪಿ ಮೈದಾನಕ್ಕೆ ಹೆಲಿಕಾಪ್ಟರ್‌ನಲ್ಲಿ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಅವರು, ನಂತರ ರಾಣಿ ಚನ್ನಮ್ಮನ ವೃತ್ತದಿಂದ ರೋಡ್​ಶೋ ನಡೆಸಿದರು. 

ಪೊಲೀಸ್ ಬಿಗಿ ಬಂದೋಬಸ್ತ್​ ನೊಂದಿಗೆ ಆರಂಭವಾದ ಪ್ರಧಾನಿ ಮೋದಿ ಅವರ ರೋಡ್ ಶೋ, ನಗರದ ಕಾಲೇಜು ರಸ್ತೆ, ಧರ್ಮವೀರ ಸಂಭಾಜಿ ವೃತ್ತ, ರಾಮಲಿಂಗಖಿಂಡ್‌ ಗಲ್ಲಿ, ಶನಿಮಂದಿರ, ಕ‍ಪಿಲೇಶ್ವರ ಮಂದಿರ ಮೇಲ್ಸೇತುವೆ, ಶಿವಾಜಿ ಉದ್ಯಾನ ರಸ್ತೆ, ಹಳೆ ಪಿ.ಬಿ.ರಸ್ತೆ, ಬಿ.ಎಸ್‌.ಯಡಿಯೂರಪ್ಪ ಮಾರ್ಗವಾಗಿ ಸಂಚರಿಸಿ ವೇದಿಕೆ ತಲುಪಲಿದೆ. 

ತಮ್ಮ ವಾಹನದಲ್ಲಿ ಚಾಲಕರ ಪಕ್ಕದ ಮುಂದಿನ ಸಾಲಿನಲ್ಲಿ ನಿಂತಿರುವ ಪ್ರಧಾನಿಗಳು ಜನರತ್ತ ಕೈಬೀಸುತ್ತಿದ್ದಾರೆ.

ಇದಕ್ಕೂ ಮುನ್ನ ಬೆಳಗಾವಿ ಸಾಂಬ್ರಾ ಏರ್​ಪೋರ್ಟ್​ಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಎಡಿಜಿಪಿ ಅಲೋಕ್ ಕುಮಾರ್, ​ಬೆಳಗಾವಿ ಪ್ರಾದೇಶಿಕ ಆಯುಕ್ತ ಎಂ.ಜಿ.ಹಿರೇಮಠ, ಸಂಜಯ್ ಪಾಟೀಲ್ ಸ್ವಾಗತಿಸಿದರು.

Similar News