ಚಿಕ್ಕಮಗಳೂರು | ಕ್ರೀಡಾಪಟುವಿನ ಮೇಲೆ ಲೈಂಗಿಕ ದೌರ್ಜನ್ಯ: ಅಥ್ಲೆಟಿಕ್ ತರಬೇತುದಾರನ ವಿರುದ್ಧ ಪೊಕ್ಸೊ ಪ್ರಕರಣ

Update: 2023-02-28 09:51 GMT

ಚಿಕ್ಕಮಗಳೂರು: ಅಥ್ಲೆಟಿಕ್ ತರಬೇತುದಾರನೊಬ್ಬ ಅಪ್ರಾಪ್ತ ಕ್ರೀಡಾಪಟುವಿನ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಪರಾರಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಈ ಸಂಬಂಧ ಸಂತ್ರಸ್ತೆ ಕ್ರೀಡಾಪಟುವಿನಿಂದ ಚಿಕ್ಕಮಗಳೂರು ಎಸ್ಪಿ ಉಮಾ ಪ್ರಶಾಂತ್ ಗೆ ದೂರು ಸಲ್ಲಿಕೆಯಾಗಿದ್ದು, ಚಿಕ್ಕಮಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಆರೋಪಿ ಭರತ್ ವಿರುದ್ಧ ಪೊಕ್ಸೊ ಕೇಸ್ ದಾಖಲಾಗಿದೆ. 

ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ ಬಿಹಾರದ ಪಾಟ್ನಾದಲ್ಲಿ‌ ಆಯೋಜನೆ ಮಾಡಿದ್ದ ಕ್ರೀಡಾ ಕೂಟದಲ್ಲಿ ಭಾಗಿಯಾಗಿದ್ದಾಗ ಈ ಘಟನೆ ನಡೆದಿದೆ. ಫೆ. 15ರಂದು ಕ್ರೀಡಾಕೂಟ ಮುಗಿಸಿ ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಬಸ್ಸಿನಲ್ಲಿ ಬರುವಾಗ ಕೃತ್ಯ ನಡೆದಿದೆ. ಅಲ್ಲದೇ ಈ ವಿಷಯವನ್ನು ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. 

ಆರೋಪಿ ಭರತ್ ಎಸ್ ಜಿಲ್ಲಾ ಯುವ ಸಬಲೀಕರಣ, ಕ್ರೀಡಾ ಇಲಾಖೆಯಯಲ್ಲಿ ಅಥ್ಲೆಟಿಕ್ಸ್ ‌ ತರಬೇತುದಾರನಾರಾಗಿದ್ದು, ಪ್ರಕರಣ ದಾಖಲಾಗುತ್ತಿದ್ದಂತೆ ತೆಲೆಮರೆಸಿಕೊಂಡಿದ್ದಾನೆನ್ನಲಾಗಿದೆ. 

Similar News