×
Ad

ಬನವಾಸಿ | BJP ವಿರುದ್ಧ ಪೋಸ್ಟರ್ ಅಭಿಯಾನ: 4 ಮಂದಿ 'ಗೋ ಬ್ಯಾಕ್' ಅಂದ್ರೆ ತಲೆಕೆಡಿಸಿಕೊಳ್ಳಲ್ಲ ಎಂದ ಸಿಎಂ ಬೊಮ್ಮಾಯಿ

Update: 2023-02-28 12:49 IST

ಕಾರವಾರ, ಫೆ.28: ಬನವಾಸಿ ಕದಂಬೋತ್ಸವಕ್ಕೆ ಇಂದು (ಮಂಗಳವಾರ) ಮುಖ್ಯಮಂತ್ರಿ  ಬಸವಾಜ ಬೊಮ್ಮಾಯಿ ಆಗಮಿಸುತ್ತಿದ್ದು,  ಅವರು ಸಂಚರಿಸುವ ರಸ್ತೆ ಬದಿಯ ಮರ ಹಾಗೂ ಕಟ್ಟಡಗಳಿಗೆ “ಪೇ ಸಿಎಂ” ಪೊಸ್ಟರ್ ಅಳವಡಿಕೆ ಮಾಡಿದ್ದಾರೆ.

ರಾಜ್ಯದ ಹಲವೆಡೆ ನಡೆಯುತ್ತಿದ್ದ ಪೇ ಸಿಎಂ ಪೋಸ್ಟರ್ ಅಭಿಯಾನ ಮುಂದುವರೆದಿದ್ದು,  ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಅವರ ಬಾವಚಿತ್ರ ಇರುವ ಪೊಸ್ಟರ್​ನಲ್ಲಿ “ಆಹಾರದ ಕಿಟ್ ಸ್ಕ್ಯಾಮ್​ಗೆ pay ಮಾಡಿ, ಡೀಲ್ ನಿಮ್ದು ಕಮೀಷನ್ ನಮ್ದು” ಎಂದು  ಬರೆಯಲಾಗಿದೆ.

"ನಾಲ್ಕು ಮಂದಿ ಗೋ ಬ್ಯಾಕ್ ಅಂದ್ರೆ ತಲೆಕೆಡಿಸಿಕೊಳ್ಳಲ್ಲ"

ಇನ್ನು ಈ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ,  ''ನಾಲ್ಕು ಮಂದಿ ಗೋ ಬ್ಯಾಕ್ ಅಂದ್ರೆ ತಲೆಕೆಡಿಸಿಕೊಳ್ಳಲ್ಲ. ಗೋ ಬ್ಯಾಕ್ ಅಭಿಯಾನ ಮಾಮೂಲಿಯಾಗಿದೆ'' ಎಂದು ಹೇಳಿದರು. 

Similar News