ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ಹೈವೆ ಉದ್ಘಾಟನೆ ದಿನದಂದು ಕಪ್ಪು ಬಾವುಟ ಪ್ರದರ್ಶನ: ಎಂ.ಲಕ್ಷ್ಮಣ್ ಎಚ್ಚರಿಕೆ
ಮೈಸೂರು: ಮೈಸೂರು- ಬೆಂಗಳೂರು ಎಕ್ಸ್‌ಪ್ರೆಸ್ ಹೈವೆ ಟೋಲ್ ದರ ಕಡಿಮೆ ಮಾಡುವಂತೆ ಮತ್ತು ಸರ್ವೀಸ್ ರಸ್ತೆ ನಿರ್ಮಿಸಿದ ಬಳಿಕ ಟೋಲ್ ಸಂಗ್ರಹಿಸುವಂತೆ ಒತ್ತಾಯಿಸಿ ಮಾ.11ರ ಎಕ್ಸ್ ಪ್ರೆಸ್ ಹೈವೆ ಉದ್ಘಾಟನೆ ದಿನದಂದು ಮೌನ ಧರಣಿ, ಕಪ್ಪು ಬಾವುಟ ಪ್ರದರ್ಶನ ಮಾಡಲಾಗುವುದು ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ತಿಳಿಸಿದ್ದಾರೆ.
ನಗರ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು-ನಿಡಘಟ್ಟ ಟೋಲ್ ಸಂಗ್ರಹವನ್ನು ರಾತ್ರೋರಾತ್ರಿ ಹಿಂಪಡೆಯಲಾಗಿದೆ. ಮಾ.14ರಿಂದ ವಸೂಲಿ ಮಾಡಲಾಗುತ್ತದೆ. ಈಗ ನಿಗದಿಪಡಿಸಿರುವ ದರವೂ ಜನರನ್ನು ಸುಲಿಗೆ ಮಾಡುತ್ತದೆ ಎಂದು ಟೀಕಿಸಿದರು. ಕೇಂದ್ರ ಸಾರಿಗೆ ಇಲಾಖೆ ಎಕ್ಸ್ ಪ್ರೆಸ್ ಹೈವೆ ಟೋಲ್ ಸಂಗ್ರಹದ ಬಗ್ಗೆ ತಿದ್ದುಪಡಿ ಮಾಡಿದೆ. ಅದರ ಪ್ರಕಾರ ಭೂಮಿ ಮಟ್ಟದ ರಸ್ತೆಗೆ 1 ಕಿ.ಮೀ.ಗೆ 2.50 ರೂ., ಎಲಿವೇಟರ್ ರಸ್ತೆಗೆ 3.50 ರೂ. ನಿಗದಿಪಡಿಸಿದೆ. ಇದರ ಪ್ರಕಾರ ಬೆಂಗಳೂರು-ನಿಡಘಟ್ಟದವರೆಗೆ 55 ಕಿಮೀಗೆ 135 ರೂ. ಪಾವತಿಸಬೇಕು. ಇದರ ಪ್ರಕಾರ ನೀಡಿದರು. ಮೈಸೂರು-ಬೆಂಗಳೂರು 118 ಕಿಮೀ ಏಕಮುಖ ಸಂಚಾರಕ್ಕೆ 300 ರೂ. ಪಾವತಿಸಬೇಕಾಗುತ್ತದೆ ಎಂದು ಮಾಹಿತಿ ನೀಡಿದರು.
ಸಂಸದ ಪ್ರತಾಪಸಿಂಹ ಬಿಜೆಪಿ ಕಾರ್ಯಕರ್ತರು ಮೈಮರೆತರೆ ಸಿದ್ದರಾಮಯ್ಯ ನೇತೃತ್ವದ ತಾಲಿಬಾನ್ ಸರಕಾರ ಅಧಿಕಾರಕ್ಕೆ ಬರುತ್ತದೆಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಆರೆಸ್ಸೆಸ್ ಮತ್ತು ತಾಲಿಬಾನಿಗಳು ಸಾಮ್ಯತೆ ಇರುವ 10 ಅಂಶಗಳನ್ನು ಪಟ್ಟಿ ಮಾಡಿದರು. ವಸ್ತ್ರ, ವಿಚಾರ, ರಕ್ತಪಾತ, ಕೋಮು ಗಲಭೆ ಬಯಸುತ್ತಾರೆ. ವ್ಯವಸ್ಥೆ ಬುಡಮೇಲು ಮಾಡುವುದರ ಜತೆಗೆ ಸಂವಿಧಾನದ ಮೇಲೆ ನಂಬಿಕೆ ಇಲ್ಲ. ಪ್ರಶ್ನೆ ಮಾಡಿದರೆ ದೇಶದ್ರೋಹಿಯಾಗಬೇಕು. ಧ್ವಜದ ಮೇಲೆ ನಂಬಿಕೆ ಇಲ್ಲ. ತಮ್ಮ ಧರ್ಮದವರ ಮೇಲೆ ಮಾತ್ರ ಪ್ರೀತಿಯಿರುತ್ತದೆ ಎಂದು ಟೀಕಿಸಿದರು.
ಮೊಬೈಲ್ ವ್ಯಾನ್ ಮೂಲಕ ಎಲ್‌ಇಡಿ ಸ್ಟೀನ್ ನಲ್ಲಿ ಬಿಜೆಪಿ ಕಾರ್ಯಕ್ರಮ ಪ್ರಸಾರ ಮಾಡುವುದರ ಜತೆಗೆ ಕಾಂಗ್ರೆಸ್ ನಾಯಕರ ಬಗ್ಗೆ ಕೆಟ್ಟದಾಗಿ ತೋರಿಸಲಾಗುತ್ತಿದೆ. ಪೊಲೀಸರು ನಿಷ್ಕ್ರಿಯರಾಗಿ ದಾರ? ಎಲ್ಲ ವಾಹನಗಳನ್ನು ವಶಕ್ಕೆ ಪಡೆಯಬೇಕು. ಇಲ್ಲದಿದ್ದರೆ ಬಿಜೆಪಿ ವಾಹನಗಳ ಪಕ್ಕದಲ್ಲಿ ಬಿಬಿಸಿ ಚಿತ್ರವನ್ನು ಪ್ರದರ್ಶನ ಮಾಡುತ್ತೇವೆ ಎಂದು ಎಚ್ಚರಿಕೆ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್, ನಗರ ಅಧ್ಯಕ್ಷ ಆರ್. ಮೂರ್ತಿ, ಪ್ರಧಾನ ಕಾರ್ಯದರ್ಶಿ ಶಿವಣ್ಣ, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ.ರಾಮು, ಮಾಧ್ಯಮ ವಕ್ತಾರ ಮಹೇಶ್, ಗಿರೀಶ್ ಉಪಸ್ಥಿತರಿದ್ದರು.