ಮೈತ್ರಿ ಸರ್ಕಾರದಲ್ಲಿ ನನಗೆ ಒಂದು ಮನೆ ಕೊಡಲಿಲ್ಲ...: ಎಚ್.ಡಿ ಕುಮಾರಸ್ವಾಮಿ

''ನಾನು ಸಿದ್ದರಾಮಯ್ಯ ಅವರಿಂದ ಆಡಳಿತ ಕಲಿಯಬೇಕಾಗಿಲ್ಲ''

Update: 2023-03-01 08:28 GMT

ಚಿಕ್ಕಮಗಳೂರು: 'ಮೈತ್ರಿ ಸರ್ಕಾರದಲ್ಲಿ ನನಗೆ ಒಂದು ಮನೆ ಕೊಡಲಿಲ್ಲ, ಜನ ತಿರಸ್ಕಾರ ಮಾಡಿದ್ರೂ ಮನೆ ಬಳಸಿಕೊಂಡ್ರಿ. ಕುಮಾರಕೃಪವನ್ನು ಹೇಗೆ ಬಳಸಿಕೊಂಡ್ರಿ ನನಗೆ ಗೊತ್ತಿದೆ, ನಾನು ಎಲ್ಲಿ ಇರಬೇಕಿತ್ತು. ಕಾಂಗ್ರೆಸ್ ಶಾಸಕರಿಗೆ 19 ಸಾವಿರ ಕೋಟಿ ಹಣ ನೀಡಿದ್ದೇನೆ. ಅದರ ದಾಖಲೆ ಬಿಡುಗಡೆಗೂ ನಾನು ಸಿದ್ಧ' ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರ, ''ನಾನು ಸಿದ್ದರಾಮಯ್ಯ ಅವರಿಂದ ಆಡಳಿತ ಕಲಿಯಬೇಕಾಗಿಲ್ಲ.ಜನ ಯಾರ ಆಡಳಿತ ಹೇಗೆ ಅಂತ ನೋಡಿದ್ದಾರೆ. ಅಧಿಕಾರ ಇರಲಿ, ಇಲ್ಲದಿರಲಿ ನನ್ನಷ್ಟು ಜನರನ್ನು ಯಾರೂ ನೋಡಿಲ್ಲ'' ಎಂದು ಹೇಳಿದರು. 

'ಸಿದ್ದರಾಮಯ್ಯ ಅವರಿಗೊಂದು ಕಿವಿ ಮಾತು, ಜೆಡಿಎಸ್ ಬಗ್ಗೆ ಚರ್ಚೆ ಮಾಡಬೇಡಿ. ರಾಜ್ಯದ ಅಭಿವೃದ್ಧಿ ಕುಂಠಿತಕ್ಕೆ ನಿಮ್ಮ ಪಾಲು ಇದೆ. ಕೊಡಗಿನಲ್ಲಿ ಮನೆ ಕಟ್ಟಿಸಿದ್ದೇನೆ ನಾನು ಸರಿಯಾಗಿಯೇ ಆಡಳಿತ ನಡೆಸಿದ್ದೇನೆ. ನನ್ನಷ್ಟು ಬಡವರನ್ನ ಭೇಟಿಯಾದವರು ಯಾರೂ ಇಲ್ಲ. ಸಮಾಜ ಕಲ್ಯಾಣಕ್ಕೆ 29 ಸಾವಿರ ಕೊಟ್ಟಿದ್ದೇನೆ ಎನ್ನುತ್ತೀರಾ ಎಲ್ಲಿ ಹಣ ? ಜೆಡಿಎಸ್ ಬಗ್ಗೆ ಮಾತನಾಡುವ ನೈತಿಕತೆ ನಿಮಗಿಲ್ಲ' ಎಂದು ಕಿಡಿಕಾರಿದರು. 

Similar News