ಹಂಪಿ ಸ್ಮಾರಕದ ಮೇಲೆ ಹತ್ತಿ ಡಾನ್ಸ್‌ ಮಾಡಿದ ಯುವಕ: ಪ್ರಕರಣ ದಾಖಲು

Update: 2023-03-01 10:42 GMT

ಹೊಸಪೇಟೆ: ಹಂಪಿ ಹೇಮಕೂಟ ಸಂರಕ್ಷಿತ ಸ್ಮಾರಕ ಮೇಲೆ ಹತ್ತಿ ಡಾನ್ಸ್‌ ಮಾಡಿ ಅದರ ದೃಶ್ಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ ಯುವಕನ ವಿರುದ್ಧ ಹಂಪಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಇತ್ತೀಚೆಗೆ ಯುವಕನೋರ್ವ  ಸ್ಮಾರಕದ ಮಂಟಪಕ್ಕೆ ಹತ್ತಿ ಡಾನ್ಸ್‌ ಮಾಡಿರುವ ದೃಶ್ಯವನ್ನು ಇನ್‌ಸ್ಟಾಗ್ರಾಂನ ‘ರೀಲ್ಸ್‌’ ನಲ್ಲಿ ಅಪ್ ಲೋಟ್ ಮಾಡಿದ್ದ. ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. 

ಈ ಸಂಬಂಧ ಆತನ ವಿರುದ್ಧ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ (ಎಎಸ್‌ಐ) ಅಧಿಕಾರಿಗಳು ಮಂಗಳವಾರ ಹಂಪಿ ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದ್ದಾರೆ. ವಿಡಿಯೋ ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ | ಬೆಂಗಳೂರು: ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಯ ಹತ್ಯೆ

Similar News