ವಿಧಾನಸಭಾ ಚುನಾವಣೆ: ಎಸ್‍ಡಿಪಿಐ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ

Update: 2023-03-01 15:01 GMT

ಬೆಂಗಳೂರು, ಮಾ.1:ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆ ಎಸ್‍ಡಿಪಿಐ ಪಕ್ಷವೂ ಎರಡನೆ ಪಟ್ಟಿ ಬಿಡುಗಡೆ ಮಾಡಿದ್ದು, ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಶಾಫಿ ಬೆಳ್ಳಾರೆ, ಉಳ್ಳಾಲ ಕ್ಷೇತ್ರದಿಂದ ರಿಯಾಝ್ ಫರಂಗಿಪೇಟೆ ಸೇರಿದಂತೆ ಒಟ್ಟು 9 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗಿದೆ ಎಂದು ಎಸ್‍ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ.ಫೈಝಿ ತಿಳಿಸಿದ್ದಾರೆ.

ಬುಧವಾರ ನಗರದ ಖಾಸಗಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇತ್ತೀಚಿಗೆ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ನಮ್ಮ ಪಕ್ಷ ಸ್ಪರ್ಧಿಸಲಿರುವ 54 ಕ್ಷೇತ್ರಗಳ ಪಟ್ಟಿ ಮತ್ತು 10 ಅಭ್ಯರ್ಥಿಗಳ ಹೆಸರುಗಳನ್ನು ಬಿಡುಗಡೆ ಮಾಡಿದ್ದೇವೆ. ಈಗ ಎರಡನೆ ಪಟ್ಟಿಯಲ್ಲಿ ಒಂಬತ್ತು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದೇವೆ ಮತ್ತು ಉಳಿದ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಜಾರಿಯಲ್ಲದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಉಪಾಧ್ಯಕ್ಷ ದೇವನೂರು ಪುಟ್ಟನಂಜಯ್ಯ, ಸಾದಿಯಾ ಸಯಿದಾ, ರಾಷ್ಟ್ರೀಯಸಮಿತಿ ಸದಸ್ಯ ಅಬ್ದುಲ್ ಹನ್ನಾನ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಬಿ.ಆರ್. ಭಾಸ್ಕರ್ ಪ್ರಸಾದ್, ಅಫ್ಸರ್ ಕೊಡ್ಲಿಪೇಟೆ, ಅಬ್ದುಲ್ ಲತೀಫ್ ಪುತ್ತೂರು ಮತ್ತು ಅಭ್ಯರ್ಥಿಗಳು ಹಾಗೂ ಪಕ್ಷದ ನಾಯಕರು ಉಪಸ್ಥಿತರಿದ್ದರು.

ಎರಡನೆ ಪಟ್ಟಿಯ ಅಭ್ಯರ್ಥಿಗಳು..!

* ಅಮೀನ್ ಮೊಹ್ಸಿನ್-(ಮಡಿಕೇರಿ)
* ಸೈಯದ್ ಇಶಾಕ್ ಹುಸೇನ್-(ರಾಯಚೂರು)
* ಯಮನಪ್ಪ ಗುಣದಾಳ್-(ತೇರದಾಳ)
* ಚಂದ್ರು ಅಂಗಡಿ-(ಮೂಡಿಗೆರೆ)
* ಅಥಾವುಲ್ಲಾ ದ್ರಾಕ್ಷಿ-(ಬಿಜಾಪುರ)
* ರಿಯಾಝ್ ಪರಂಗಿಪೇಟೆ-(ಉಲ್ಲಾಳ)
* ರಹೀಮ್ ಪಟೇಲ್-(ಗುಲ್ಬರ್ಗ ಉತ್ತರ)
* ಶಾಫಿ ಬೆಳ್ಳಾರೆ-(ಪುತ್ತೂರು)
* ಡಾ.ವಿಜಯ್ ಎಂ.ಗುಂಟ್ರಾಲ್-(ಹುಬ್ಬಳ್ಳಿ ಪೂರ್ವ) 

Similar News