×
Ad

ಮಲ್ಲಿಕಾರ್ಜುನ ಖರ್ಗೆಗೆ ಕನ್ನಡ ಪಾಠ ಮಾಡಿದ ತಮಿಳುನಾಡು ಸಿಎಂ ಸ್ಟಾಲಿನ್!

Update: 2023-03-02 14:04 IST

ಬೆಂಗಳೂರು: ಬುಧವಾರ (ಮಾ.1) ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ (M. K. Stalin) ಅವರ 70ನೇ ಹುಟ್ಟುಹಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿ ಹಲವು ಗಣ್ಯರು ಶುಭಾಶಯ ಕೋರಿದ್ದಾರೆ. 

''ತಮಿಳುನಾಡು ಮುಖ್ಯಮಂತ್ರಿ ಮತ್ತು ಡಿಎಂಕೆ ಅಧ್ಯಕ್ಷ ಎಂ ಕೆ ಸ್ಟಾಲಿನ್ ಜಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು'' ಎಂದು ಖರ್ಗೆ ಅವರು ಟ್ವೀಟ್ ಮಾಡಿದ್ದರು. ಈ ವೇಳೆ 'ಜಿ' ಎಂದು ಸಂಬೋಧಿಸಿದ್ದಕ್ಕೆ ಖರ್ಗೆ ಅವರ ಟ್ವೀಟ್ ಗೆ ಧನ್ಯವಾದ ತಿಳಿಸುವ ನೆಪದಲ್ಲಿ ಸ್ಟಾಲಿನ್ ಅವರು ಪರೋಕ್ಷವಾಗಿ ಕನ್ನಡದ ಪಾಠ ಮಾಡಿದ್ದಾರೆ.

''ಖರ್ಗೆ ಅವರೇ, ನಿಮ್ಮ ಆತ್ಮೀಯ ಹಾರೈಕೆಗಳಿಗಾಗಿ ಧನ್ಯವಾದ'' ಎಂದು ಪ್ರತಿಕ್ರಿಯಿಸುವ ಮೂಲಕ 'ಜಿ' ಸಂಸ್ಕೃತಿಯನ್ನು ಬಿಟ್ಟು ಬಿಡುವಂತೆ ಸ್ಟಾಲಿನ್ ಅವರು ಸಲಹೆ ನೀಡಿದ್ದಾರೆ. ಸದ್ಯ ಸ್ಟಾಲಿನ್ ಅವರ ಟ್ವೀಟ್ ಸಾಮಾಜಿಕ ಜಾತಣದಲ್ಲಿ ವೈರಲ್ ಆಗುತ್ತಿದ್ದು, ಸ್ಟಾಲಿನ್ ಅವರ ನಡೆಗೆ ಕನ್ನಡಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

''ಕನ್ನಡಿಗರಿಗೆ ಕನ್ನಡತನದ ಪಾಠ ಮಾಡಿದ್ದಾರೆ'' ಎಂದು ಕನ್ನಡಪರ ಕಾರ್ಯಕರ್ತ ಅರುಣ್ ಜಾವಗಲ್ ಟ್ವೀಟ್ ಮಾಡಿದ್ದಾರೆ. 

'ಸ್ಟಾಲಿನ್ ಅವರ ಪ್ರತಿ ರಕ್ತದ ಕಣದಲ್ಲಿ #stopHindiImposition ಇದೆ' ಎಂದು ನೆಟ್ಟಿಗರೊಬ್ಬರು ಅಭಿಪ್ರಾಯಿಸಿದ್ದಾರೆ. 

''ಹುಟ್ಟು ಹಬ್ಬದ ಶುಭಾಶಯಗಳು ಸ್ಟಾಲಿನ್ ಅವರೇ, ನಿಮ್ಮ ಪ್ರೇರಣೆ ನಮ್ಮ ನಾಡಿನ ರಾಜಕಾರಣಿಗಳಿಗೆ ಬರಲಿ'' ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.  

''ಧನ್ಯವಾದ ಸ್ಟಾಲಿನ್ ಅವರೇ, ಜೀ ರೋಗದಿಂದ ಬಳಲುತ್ತಿರುವ ನಮ್ಮ ರಾಜಕಾರಣಿಗಳು ಇವರನ್ನು ನೋಡಿ ಕಲಿಯಬೇಕಿದೆ'' ಎಂದು ಹರೀಶ್ ಎಂಬವರು ಪ್ರತಿಕ್ರಿಯಿಸಿದ್ದಾರೆ. 

ಇದನ್ನೂ ಓದಿ: ಜೆಡಿಎಸ್ ಶಾಸಕ ಶಿವಲಿಂಗೇಗೌಡ ಕಾಂಗ್ರೆಸ್ ಸೇರ್ಪಡೆ: ಬೆಂಬಲಿಗರ ಸಭೆಯಲ್ಲಿ ನಿರ್ಣಯ

Similar News