ಮುಂದಿನ ವಾರ 4 ಬಿಜೆಪಿ ಮಂತ್ರಿಗಳು ಕಾಂಗ್ರೆಸ್ ಗೆ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್

Update: 2023-03-02 12:29 GMT

ಮಡಿಕೇರಿ ಮಾ.2 : 'ಬಿಜೆಪಿಯ ತಲಾ ನಾಲ್ಕು ಮಂದಿ ಸಚಿವರು ಮತ್ತು ಶಾಸಕರು ಆ ಪಕ್ಷವನ್ನು ತೊರೆದು ಕಾಂಗ್ರೆಸ್‍ಗೆ ಸೇರ್ಪಡೆಯಾಗಲಿದ್ದಾರೆ' ಎಂದು ಕೆಪಿಸಿಸಿ ವಕ್ತಾರರು ಹಾಗೂ ಜಿಲ್ಲಾ ಉಸ್ತುವಾರಿ ಎಂ. ಲಕ್ಷ್ಮಣ್ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, '4 ಜನ ಮಂತ್ರಿಗಳು ಸೇರಿ ಒಟ್ಟು 8 ಜನ ಶಾಸಕರು ಮುಂದಿನ ವಾರ ಕಾಂಗ್ರೆಸ್ ಸೇರಲಿದ್ದು, ಅದರಲ್ಲಿ ಲಿಂಗಾಯತ ಸಮುದಾಯದ ಇಬ್ಬರು ಪ್ರಮುಖ ಮಂತ್ರಿಗಳು ಸೇರಲಿದ್ದಾರೆ' ಎಂದು ಹೇಳಿದರು. 

''ಸರ್ಕಾರಿ ನೌಕರರ ವೇತನ ಹೆಚ್ಚಳ ಪ್ರಹಸನ''

 ರಾಜ್ಯ ಸರ್ಕಾರಿ ನೌಕರರ ವೇತನವನ್ನು ಶೇ.17 ರಷ್ಟು ಹೆಚ್ಚಿಸಲಾಗಿದೆಯೆಂದು ರಾಜ್ಯ ಸರ್ಕಾರ ಘೋಷಣೆ ಮಾಡಿ, ಅದಕ್ಕೆ ನೌಕರರರ ಸಂಘದ ಷಡಕ್ಷರಿ ಅವರು ಮುಷ್ಕರ ಹಿಂದಕ್ಕೆ ತೆಗೆದುಕೊಂಡ ಪ್ರಹಸನ ನಡೆದಿದೆ. ಶೀಘ್ರವೇ ಚುನಾವಣಾ ಘೋಷಣೆಯಾಗುವುದರಿಂದ ಈ ಘೋಷಣೆ ಜಾರಿಯಾಗುವುದೇ ಅನುಮಾನವೆಂದು ಎಂ.ಲಕ್ಷ್ಮಣ್ ಆರೋಪಿಸಿದರು.

ನೌಕರರ ಸಂಘದ ಅಧ್ಯಕ್ಷರು ಮುಷ್ಕರದಿಂದ ಹಿಂದಕ್ಕೆ ಸರಿಯುವ ಮೂಲಕ ರಾಜ್ಯದ 10 ಲಕ್ಷ ನೌಕರರನ್ನು ವಂಚಿಸಿರುವುದಲ್ಲದೆ, ಎನ್‍ಪಿಎಸ್ ನೌಕರರನ್ನು ನಡು ನೀರಿನಲ್ಲಿ ಕೈಬಿಟ್ಟಿರುವುದಾಗಿ ಆರೋಪಿಸಿದರು. 

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ವಕ್ತಾರ ಹೆಚ್.ಎಸ್.ಚಂದ್ರಮೌಳಿ, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೆ.ಕೆ. ಮಂಜುನಾಥ್ ಕುಮಾರ್, ಮಾಜಿ ಸಚಿವ ಬಿ.ಎ.ಜೀವಿಜಯ, ಮಾಜಿ ಎಂಎಲ್‍ಸಿ ವೀಣಾ ಅಚ್ಚಯ್ಯ ಹಾಗೂ ಮೈಸೂರು ಜಿ.ಪಂ ಮಾಜಿ ಅಧ್ಯಕ್ಷ ಬಿ.ಎನ್.ರಾಮು ಉಪಸ್ಥಿತರಿದ್ದರು.

ಇದನ್ನೂ ಓದಿ; ಆಪ್ತರ ಜೊತೆ ಚರ್ಚಿಸಿ ತೀರ್ಮಾನ: ಕಾಂಗ್ರೆಸ್ ಸೇರುವ ಸುಳಿವು ನೀಡಿದ ಸಚಿವ ನಾರಾಯಣ ಗೌಡ 

Similar News