×
Ad

ಮೈಸೂರು: ತೋಟದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದ ಚಿರತೆ

Update: 2023-03-02 19:52 IST

ಮೈಸೂರು, ಮಾ.2: ಚಿರತೆ ದಾಳಿಯಂದ ಭಯಭೀತರಾಗಿದ್ದ ಮೈಸೂರು ಜಿಲ್ಲೆಯಲ್ಲಿ ಗುರುವಾರ ಚಿರತೆಯೊಂದು ಸೆರೆಯಾಗಿದೆ.

ಮೈಸೂರು ಜಿಲ್ಲೆ ಜಯಪುರ ಹೋಬಳಿಯ ಮಾರ್ಬಳ್ಳಿಯಲ್ಲಿ ಸುಮಾರು ಮೂರು ವರ್ಷದ ಹೆಣ್ಣು ಚಿರತೆ ಸಿಕ್ಕಿಬಿದ್ದಿದೆ.

ಮಾರ್ಬಳ್ಳಿ ಗ್ರಾಮದ ತೋಟವೊಂದರಲ್ಲಿ ಅರಣ್ಯ ಇಲಾಖೆಯವರು ಇರಿಸಿದ್ದ ಬೋನಿಗೆ ಚಿರತೆ ಸೆರೆಯಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ವಲಯ ಅಧಿಕಾರಿಗಳಾದ ಆರ್.ಎಫ್.ಓ ಸುರೇಂದ್ರ ಕೆ. ಮತ್ತು ಸಿಬ್ಬಂದಿಯವರು ಚಿರತೆಯನ್ನು ಅರಣ್ಯ ಪ್ರದೇಶಕ್ಕೆ ಬಿಡಲು ರವಾನಿಸಿದರು.

Similar News