ಹಣ, ತೋಳ್ಬಲದಿಂದ ಮೇಘಾಲಯ, ತ್ರಿಪುರದಲ್ಲಿ ಬಿಜೆಪಿಗೆ ಗೆಲುವು: ರಣದೀಪ್ ಸಿಂಗ್ ಸುರ್ಜೇವಾಲಾ ಆರೋಪ

Update: 2023-03-02 14:41 GMT

ಮಡಿಕೇರಿ ಮಾ.2 : ಮೇಘಾಲಯ ಮತ್ತು ತ್ರಿಪುರ ರಾಜ್ಯದಲ್ಲಿ ಬಿಜೆಪಿ ಹಣ ಹಾಗೂ ತೋಳ್ಬಲದಿಂದ ಗೆಲುವು ಸಾಧಿಸಿದೆ ಎಂದು ರಾಷ್ಟ್ರೀಯ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಆರೋಪಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹಣ, ತೋಳ್ಬಲದಿಂದ ಬಲದಿಂದ ಬಿಜೆಪಿ ಆ ರಾಜ್ಯಗಳಲ್ಲಿ ಗೆಲವು ಸಾಧಿಸಿದೆ. ಆದರೆ ವಿವಿಧ ರಾಜ್ಯಗಳಲ್ಲಿ ನಡೆದ ಉಪಚುನಾವಣೆಗಳಲ್ಲಿ ಬಿಜೆಪಿ ಹೀನಾಯ ಸೋಲು ಕಂಡಿದೆ. ಇದು ಕಾಂಗ್ರೆಸ್ ಪಾಲಿಗೆ ಆಶಾದಾಯಕವಾಗಿದೆ. ಕರ್ನಾಟಕದಲ್ಲಿ ಸ್ಪಷ್ಟವಾಗಿ ಕಾಂಗ್ರೆಸ್ ಪರ ಅಲೆಯಿದ್ದು, ದೇಶದಲ್ಲಿ ಮೋದಿ ಆಡಳಿತ ಅಂತ್ಯಕ್ಕೆ ಈ ರಾಜ್ಯವೇ ನಾಂದಿ ಹಾಡಲಿದೆ ಎಂದು ಭವಿಷ್ಯ ನುಡಿದರು.

ಇನ್ನು 10 ದಿನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು. ಕಾಂಗ್ರೆಸ್ ಪರ ಮತದಾರರ ಒಲವು ವ್ಯಕ್ತವಾಗಿದ್ದು, ಬಿಜೆಪಿಯ ಲಂಚಾವತಾರದಿಂದ ಜನ ಬೇಸತ್ತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತವಾಗಿದ್ದು, ಅನೇಕ ಸೌಲಭ್ಯಗಳನ್ನು ರೂಪಿಸಿದೆ ಎಂದರು.

ಕೊಡಗಿನ ಕಾಫಿ ಬೆಳೆಗಾರರ ಸಮಸ್ಯೆ ಮತ್ತು ವನ್ಯಜೀವಿ ಸಂಘರ್ಷಕ್ಕೆ ಕಾಂಗ್ರೆಸ್ ಆಡಳಿತ ಪರಿಹಾರ ಸೂಚಿಸಲಿದೆ ಎಂದು ಸುರ್ಜೇವಾಲ ಹೇಳಿದರು. 

Similar News