'ಸಿದ್ದು ನಿಜಕನಸುಗಳು' ಪುಸ್ತಕ ಬಿಡುಗಡೆಗೆ ತಡೆ ಪ್ರಕರಣ: ಸಚಿನ್ ಮೀಗಾರಿಗೆ ಚಿಕ್ಕಮಗಳೂರು ಎಸ್ಪಿ ನೋಟಿಸ್

Update: 2023-03-03 06:01 GMT

ಚಿಕ್ಕಮಗಳೂರು, ಮಾ.3: 'ಸಿದ್ದು ನಿಜಕನಸುಗಳು' ಪುಸ್ತಕಗಳು ಬಿಡುಗಡೆಗೆ ತಡೆ ಕೋರಿ ಕಿಸಾನ್ ಕಾಂಗ್ರೆಸ್ ರಾಜ್ಯಾಧ್ಯಕ್ಷ. ಸಚಿನ್ ಮೀಗಾ ಸಲ್ಲಿಸಿರುವ ದೂರಿನ ವಿಚಾರಣೆಗೆ ಸಂಬಂಧಿಸಿ ಮೀಗಾ ಅವರಿಗೆ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಅಧೀಕ್ಷಕರು ನೋಟಿಸ್ ಜಾರಿ ಮಾಡಿದ್ದಾರೆ.

'ಸಿದ್ದು ನಿಜ ಕನಸುಗಳು' ವಿವಾದಿತ ಪುಸ್ತಕವನ್ನು ಕಳೆದ ಜ.9ರಂದು ಬೆಂಗಳೂರಿನಲ್ಲಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಬಿಡುಗಡೆ ಮಾಡಿದ್ದು, ಈ ವೇಳೆ ಕಾಂಗ್ರೆಸ್ ಮುಖಂಡರು ಪುಸ್ತಕ ಬಿಡುಗಡೆ ವಿರೋಧಿಸಿ ಪ್ರತಿಭಟನೆ ಮಾಡಿದ್ದರು.

 ಈ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಲು ಬಿಜೆಪಿಯವರು ತೀರ್ಮಾನಿಸಿದ್ದು, ಪುಸ್ತಕದ ಮೂಲಕ ಬಿಜೆಪಿ ಸುಳ್ಳು ಹರಡಿ ಗಲಭೆ ಸೃಷ್ಟಿಸಿ, ಸಮಾಜದ ಸ್ವಾಸ್ಥ್ಯ ಹದಗೆಡಿಸಲು ಮುಂದಾಗಿದೆ ಎಂದು ಆರೋಪಿಸಿ ಸಚಿನ್ ಮೀಗಾ ಬೆಂಗಳೂರಿನಲ್ಲಿ‌ ದೂರು ಸಲ್ಲಿಸಿದ್ದರು.

ಬಳಿಕ ಈ ಪುಸ್ತಕ ಬಿಡುಗಡೆಗೆ ನ್ತಾಯಾಲಯ ತಡೆ ನೀಡಿದ್ದು, ದೂರಿನ ವಿಚಾರಣೆಗಾಗಿ ಚಿಕ್ಕಮಗಳೂರು ಎಸ್ಪಿ ಕಚೇರಿಗೆ ಆಗಮಿಸಬೇಕೆಂದು ಎಸ್ಪಿ ಕಚೇರಿಯಿಂದ ಮೀಗಾ ಅವರಿಗೆ ನೋಟಿಸ್ ನೀಡಿತ್ತು. ಆದರೆ ಮೀಗಾ ಫೆ.21ರಂದು ವಿಚಾರಣೆಗೆ ಹಾಜರಾಗದ ಕಾರಣಕ್ಕೆ ಮಾ.2ಕ್ಕೆ ಹಾಜರಾಗುವಂತೆ ನೋಟಿಸ್ ನೀಡಿತ್ತು. ಆದರೆ ಅವರು ಮಾ.2ರಂದೂ ವಿಚಾರಣೆಗೆ ಹಾಜರಾಗಿಲ್ಲ ಎಂದು ತಿಳಿದು ಬಂದಿದೆ.

ಈ ಬಗ್ಗೆ 'ವಾರ್ತಾಭಾರತಿ'ಗೆ ಪ್ರತಿಕ್ರಿಯಿಸಿರುವ ಸಚಿನ್ ಮೀಗಾ, ಚಿಕ್ಕಮಗಳೂರು ಎಸ್ಪಿ ಕಚೇರಿಯಿಂದ ಈ ಪ್ರಕರಣದ ವಿಚಾರಣಗೆ ನೋಟಿಸ್ ಬಂದಿದ್ದು, ಇಂದು ವಿಚಾರಣೆಗೆ ಹಾಜರಾಗುತ್ತಿದ್ದೇನೆ. ಪುಸ್ತಕ ಬಿಡುಗಡೆಗೆ ತಡೆ ಸಿಕ್ಕಿದೆ ಎಂದು ಹೇಳಿದ್ದಾರೆ.

Similar News