×
Ad

ವಿಜಯಪುರ: ಸೇತುವೆಯ ಮೇಲೆ ಮೊಸಳೆ ಪ್ರತ್ಯಕ್ಷ!

Update: 2023-03-04 10:09 IST

ವಿಜಯಪುರ, ಮಾ.4: ಜಿಲ್ಲೆ ಕೊಲ್ಹಾರ ಪಟ್ಟಣದ ಬಳಿ‌ಯ ಕೃಷ್ಣಾನದಿಯ ಸೇತುವೆ ಮೇಲೆ ಇಂದು ಬೆಳಗ್ಗೆ ಬಾಯಿಯನ್ನು ಹಗ್ಗದಿಂದ ಕಟ್ಟಲ್ಪಟ್ಟ ಸ್ಥಿತಿಯಲ್ಲಿ ಮೊಸಳೆ(Crocodile)ಯೊಂದು ಪತ್ತೆಯಾಗಿದೆ.

ಜನವಸತಿಗೆ ನುಗ್ಗಿರುವ ಮೊಸಳೆಯನ್ನು ಹಗ್ಗ ಕಟ್ಟಿ ಹಿಡಿಯುವ ವೇಳೆ ತಪ್ಪಿಸಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಇಂದು ಬೆಳಗ್ಗೆ ರಸ್ತೆ ಮಧ್ಯೆ ಏಕಾಏಕಿ ಮೊಸಳೆಯನ್ನು ಕಂಡು ವಾಹನ ಸವಾರರು ಗಾಬರಿಗೊಂಡಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿರುವ ಕೊಲ್ಹಾರ ಪೊಲೀಸರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿರುವ ಅರಣ್ಯಾಧಿಕಾರಿಗಳು ಮೊಸಳೆ ಬಾಯಿಗೆ ಕಟ್ಟಿದ್ದ ಹಗ್ಗ ಬಿಡಿಸಿ ಕೃಷ್ಣಾ ನದಿಗೆ ಬಿಡಲಿದ್ದಾರೆ.

Similar News