×
Ad

ರಾಜ್ಯದಲ್ಲಿ ದೇವಸ್ಥಾನಗಳ 625 ಎಕರೆ ಭೂಮಿ ಒತ್ತುವರಿ: ವರದಿ

Update: 2023-03-04 12:52 IST

ಬೆಂಗಳೂರು: ರಾಜ್ಯದಲ್ಲಿ ಮುಜರಾಯಿ ಇಲಾಖೆಯ ದೇವಸ್ಥಾನಗಳಿಗೆ ಸೇರಿದ ಕನಿಷ್ಠ 625 ಎಕರೆ ಭೂಮಿ ಒತ್ತುವರಿಯಾಗಿದೆ ಎನ್ನುವ ಅಂಶ ಇಲಾಖೆ ನಡೆಸಿದ 5700 ದೇಗುಲಗಳ ಸಮೀಕ್ಷೆಯಿಂದ ಬಹಿರಂಗವಾಗಿದೆ. 287 ಎಕರೆ ಭೂಮಿ ಒತ್ತುವರಿಯೊಂದಿಗೆ ಕೊಡಗು ಮೊದಲ ಸ್ಥಾನದಲ್ಲಿದೆ. 87 ಎಕರೆ ಭೂಮಿ ಒತ್ತುವರಿಯಾಗಿರುವ ಕೋಲಾರ ಎರಡನೇ ಸ್ಥಾನದಲ್ಲಿದೆ. ಸಮೀಕ್ಷೆಯನ್ನು 2022ರ ಡಿಸೆಂಬರ್‌ವರೆಗೆ ಪೂರ್ಣಗೊಂಡಿರುವ ದೇಗುಲಗಳಿಗೆ ಸೀಮಿತಗೊಳಿಸಲಾಗಿದೆ. ಧಾರ್ಮಿಕ ದತ್ತಿ ಇಲಾಖೆ ಎಲ್ಲ ದೇವಸ್ಥಾನಗಳ ಆಸ್ತಿಯ ಸಮೀಕ್ಷೆಗೆ ಕ್ರಮ ಕೈಗೊಳ್ಳಲಿದೆ ಎಂದು timesofindia ವರದಿ ಮಾಡಿದೆ.

ಇಲಾಖೆ 625 ಎಕರೆ ಒತ್ತುವರಿಯನ್ನು ಪಟ್ಟಿ ಮಾಡಿದ್ದರೂ, ವಾಸ್ತವ ಒತ್ತುವರಿ, ಇಲಾಖೆ ಬಹಿರಂಗಪಡಿಸಿದ ಅಂಕಿ ಅಂಶಗಳಿಗಿಂತ ಇನ್ನಷ್ಟು ಹೆಚ್ಚಿರುವ ಸಾಧ್ಯತೆ ಇದೆ. ದೇವಸ್ಥಾನ ಸಮಿತಿಗಳನ್ನು ಹೆಚ್ಚು ದಕ್ಷವಾಗಿ ಮಾಡುವ ಕಾರ್ಯಯೋಜನೆಯ ಅಂಗವಾಗಿ ಸಮೀಕ್ಷೆ ನಡೆಸಲಾಗಿದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ರಾಜ್ಯದ 34 ಸಾವಿರ ಸಿ ವರ್ಗದ ದೇವಾಲಯಗಳ ಪೈಕಿ 5597 ದೇಗುಲಗಳ ಸಮೀಕ್ಷೆ ನಡೆಸಲಾಗಿದೆ. ಈ ಪೈಕಿ 108 ದೇವಸ್ಥಾನಗಳ 243 ಎಕರೆ ಭೂಮಿ ಒತ್ತುವರಿಯಾಗಿದೆ. 193 ಬಿ ವರ್ಗದ ದೇವಾಲಯಗಳ ಪೈಕಿ 83 ಕಡೆ ಸಮೀಕ್ಷೆ ಪೂರ್ಣಗೊಂಡಿದೆ. ಒಂಬತ್ತು ದೇವಸ್ಥಾನಗಳ 56 ಎಕರೆಗಿಂತಲೂ ಅಧಿಕ ಒತ್ತುವರಿ ದೃಢಪಟ್ಟಿದೆ. ಎ ವರ್ಗದಲ್ಲಿ ಬರುವ 205 ದೇವಸ್ಥಾನಗಳ ಪೈಕಿ 102 ದೇಗುಲಗಳ ಸಮೀಕ್ಷೆ ಆಗಿದ್ದು, 23 ಕಡೆಗಳಲ್ಲಿ 326 ಎಕರೆ ಒತ್ತುವರಿಯಾಗಿದೆ ಎಂದು ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.

Similar News