ಯಡಿಯೂರಪ್ಪರಿಗೆ ಲಿಂಗಾಯತ ಪೀಠದಿಂದ 'ರೇಣುಕಾಚಾರ್ಯ ಪ್ರಶಸ್ತಿ'
Update: 2023-03-04 12:59 IST
ಚಿಕ್ಕಮಗಳೂರು, ಮಾ.4: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಾಳೆಹೊನ್ನೂರಿನ ವೀರಶೈವ ಲಿಂಗಾಯತ ಪೀಠ ನೀಡುವ 'ರೇಣುಕಾಚಾರ್ಯ ಪ್ರಶಸ್ತಿ'ಗೆ ಭಾಜನರಾಗಿದ್ದಾರೆ.
ವೀರಶೈವ ಲಿಂಗಾಯತರ ಪಂಚ ಪೀಠಗಳಲ್ಲಿ ಮೂಲ ಪೀಠವಾಗಿರುವ ಬಾಳೆಹೊನ್ನೂರು ಮಠದಿಂದ ನೀಡಲಾಗುವ ಈ ಪ್ರಶಸ್ತಿಯನ್ನು ಮಾ.5ರಂದು ನಡೆಯುವ ರಂಭಾಪುರಿ ಮಠದ ಯುಗಮಾನೋತ್ಸವ ಕಾರ್ಯಕ್ರಮದಲ್ಲಿ ಯಡಿಯೂರಪ್ಪರಿಗೆ ಪ್ರದಾನ ಮಾಡಲಾಗುವುದು ಎಂದು ಮಠದ ಪ್ರಕಟನೆ ತಿಳಿಸಿದೆ.