ಮಹಿಳಾ ದಿನಾಚರಣೆ ಹಿನ್ನೆಲೆ: ರಾಜ್ಯದಲ್ಲಿ ಮಹಿಳಾ ಪ್ರವಾಸಿಗರಿಗೆ ರೂಮ್ ಬುಕ್ಕಿಂಗ್‍ನಲ್ಲಿ ಶೇ.50ರಷ್ಟು ರಿಯಾಯಿತಿ

Update: 2023-03-04 17:03 GMT

ಬೆಂಗಳೂರು: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನೆಲೆ ರಾಜ್ಯದಲ್ಲಿ ಮಹಿಳಾ ಪ್ರವಾಸಿಗರಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ನಿರ್ವಹಣೆ ಮಾಡುತ್ತಿರುವ ಮಯೂರ್ ಗ್ರೂಪ್ ಹೋಟೆಲ್‍ಗಳಲ್ಲಿ ಕೊಠಡಿ ಬುಕ್ಕಿಂಗ್‍ನಲ್ಲಿ ಶೇ.50ರಷ್ಟು ಹಾಗೂ ಊಟೋಪಚಾರದ ಮೇಲೆ ಶೇ.20ರಷ್ಟು ರಷ್ಟು ರಿಯಾಯತಿಯ ವಿಶೇಷ ಕೊಡುಗೆ ನೀಡಲಾಗುತ್ತಿದೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ವ್ಯವಸ್ಥಾಪಕ ನಿರ್ದೇಶಕ ಜಗದೀಶ ಜಿ. ತಿಳಿಸಿದ್ದಾರೆ.

ಮಾ.6ರಿಂದ 10ರ ವರೆಗೆ ಈ ವಿಶೇಷ ಕೊಡುಗೆ ಚಾಲ್ತಿಯಲ್ಲಿರಲಿದ್ದು, ಪ್ರವಾಸ ಕೈಗೊಳ್ಳುವ ಮಹಿಳಾ ಪ್ರವಾಸಿಗರಿಗೆ ಕ.ರಾ.ಪ್ರ.ಅ ನಿಗಮದ ಹೋಟೆಲ್‍ಗಳಲ್ಲಿ ಕೊಠಡಿಗಳನ್ನು ಕಾಯ್ದಿರಿಸುವಿಕೆಯಲ್ಲಿ ಶೇ.50 ರಷ್ಟು ರಿಯಾಯ್ತಿಯನ್ನು ನೀಡಲಾಗುತ್ತಿದೆ. ಈ ಸೌಲಭ್ಯದ ಸದುಪಯೋಗವನ್ನು ಮಹಿಳಾ ಪ್ರವಾಸಿಗರು ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿ ಮತ್ತು ಬುಕ್ಕಿಂಗ್ ಸಂಪರ್ಕಕ್ಕಾಗಿ ಕರ್ನಾಟಕ ರಾಜ್ಯ ಅಭಿವೃದ್ಧಿ ನಿಗಮದ ಪ್ರಧಾನ ಬುಕ್ಕಿಂಗ್ ಕೇಂದ್ರದ ವಿಳಾಸಕ್ಕಾಗಲಿ, ಅಥವಾ ಮೊ.ಸಂ. 89706 50070 ಸಂಪರ್ಕಿಸಲು ನಿಗಮ ಕೋರಿದೆ.

Similar News