×
Ad

ಹಾವೇರಿ | ದೇವಸ್ಥಾನ ಪ್ರವೇಶಿಸಿದ ತಾಯಿ, ಮಗನ ಮೇಲೆ ಸವರ್ಣೀಯರಿಂದ ಹಲ್ಲೆ: ಪ್ರಕರಣ ದಾಖಲು

Update: 2023-03-05 23:57 IST

ಹಾವೇರಿ, ಮಾ.05: ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ನಂದಿಹಳ್ಳಿ ಗ್ರಾಮದ ನಂದಿಹಳ್ಳಿ ಬಸವೇಶ್ವರ ದೇವಾಲಯದಲ್ಲಿ ಪೂಜೆಗೆಂದು ತೆರಳಿದ್ದ ದಲಿತ ಕುಟುಂಬದ ತಾಯಿ  ಮತ್ತು ಆಕೆಯ ಮಗನನ್ನು ತಡೆದು ಗ್ರಾಮಸ್ಥರು ಹಲ್ಲೆ ಮಾಡಿರುವ ಘಟನೆ ವರದಿಯಾಗಿದೆ. 

ಕಳೆದ ಎರಡು ದಿನಗಳ ಹಿಂದೆ ನಂದಿಹಳ್ಳಿ ಜಾತ್ರಾ ಮಹೋತ್ಸವ ನಡೆಯುತ್ತಿತ್ತು. ಈ ವೇಳೆ ದಲಿತ ಸಮುದಾಯದ ತಾಯಿ, ಮಗ ದೇವರ ದರ್ಶನಕ್ಕೆ ಹಾಗೂ ಪೊಜೆಗೆ ತೆರಳಿದ್ದರು. ಈ ವೇಳೆ ದೇವಸ್ಥಾನದ ಪ್ರವೇಶ ದ್ವಾರದಲ್ಲೇ ಮೇಲ್ವರ್ಗದ ಜನರು ಅವರನ್ನು ತಡೆದು ಎಚ್ಚರಿಕೆ ನೀಡಿದ್ದರೆನ್ನಲಾಗಿದ್ದು, ಆ ಬಳಿಕ ಮೇಲ್ವರ್ಗದ ಸಮುದಾಯ ಜನರೆಲ್ಲಾ ಸೇರಿ ದೇವಸ್ಥಾನ ಪ್ರವೇಶ ಮಾಡಿದ್ದವರ ಮನೆಗೆ ಪ್ರವೇಶಿಸಿ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. 

ಈ ಸಂಬಂಧ  ಶನಿವಾರ (ಮಾ.4) ಹಲಗೇರಿ ಪೊಲೀಸ್ ಠಾಣೆಯಲ್ಲಿ ಕಲಂ 143, 147, 148, 341, 451, 323, 354, 504 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. 

Similar News