ಯಡಿಯೂರಪ್ಪ ಹೆಲಿಕಾಪ್ಟರ್ ಲ್ಯಾಂಡಿಂಗ್ ಗೆ ಅಡ್ಡಿಯಾದ ಪ್ಲಾಸ್ಟಿಕ್ ಬ್ಯಾಗ್, ತ್ಯಾಜ್ಯಗಳು!
ಕಲಬುರಗಿ: ಹೆಲಿಕಾಪ್ಟರ್ ಲ್ಯಾಂಡಿಂಗ್ ಪ್ರದೇಶದ ಬಳಿ ಪ್ಲಾಸ್ಟಿಕ್ ಚೀಲಗಳು ಹಾಗೂ ತ್ಯಾಜ್ಯಗಳಿದ್ದ ಕಾರಣ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಅನ್ನು ಜೇವರ್ಗಿಯಲ್ಲಿ ಇಳಿಸಲು ಪೈಲಟ್ ಹರಸಾಹಸ ಪಡಬೇಕಾಯಿತು.
ಹೆಲಿಕಾಪ್ಟರ್ ಹೆಲಿಪ್ಯಾಡ್ ಗೆ ಸಮೀಪಿಸುತ್ತಿದ್ದಂತೆ ಧೂಳು ಹಾಗೂ ಪ್ಲಾಸ್ಟಿಕ್ ಹಾಳೆಗಳಿಂದಾಗಿ ಚಾಪರ್ ಅನ್ನು ಇಳಿಸಲು ಪೈಲಟ್ ಸಮಸ್ಯೆ ಎದುರಿಸಿರುವುದು, ಪೈಲಟ್ ಚಾಪರ್ ಇಳಿಸಲು ಸುರಕ್ಷಿತ ಸ್ಥಳವನ್ನು ಹುಡುಕುತ್ತಿರುವುದು ವೀಡಿಯೊದಲ್ಲಿ ಕಂಡುಬಂದಿದೆ.
ಆದಾಗ್ಯೂ, ಅಧಿಕಾರಿಗಳು, ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಅವಶೇಷಗಳನ್ನು ತೆರವುಗೊಳಿಸಿದ ನಂತರ ಪೈಲಟ್ ಮತ್ತೊಮ್ಮೆ ಲ್ಯಾಂಡಿಂಗ್ ಮಾಡಲು ಪ್ರಯತ್ನಿಸಿದರು. ಎರಡನೇ ಪ್ರಯತ್ನದಲ್ಲಿ ಅವರು ಯಶಸ್ವಿಯಾದರು.
Former #Karnataka CM @BSYBJP's chopper could not land at the helipad at Jewargi, #Kalaburgi, #Karnataka due to plastic bags at the makeshift helipad. The chopper had to be in air for sometime as officials cleared the ground of plastic debris. pic.twitter.com/DjiXps0u7C
— Imran Khan (@KeypadGuerilla) March 6, 2023