×
Ad

ರಾಯಚೂರು | ಶಾರ್ಟ್ ಸರ್ಕ್ಯೂಟ್‌ನಿಂದ ಎಸಿ ಸ್ಫೋಟ; ತಾಯಿ, ಇಬ್ಬರು ಮಕ್ಕಳು ಸಜೀವ ದಹನ

Update: 2023-03-07 09:37 IST

ರಾಯಚೂರು: ಶಾರ್ಟ್ ಸರ್ಕ್ಯೂಟ್ ನಿಂದ ಎಸಿ ಸ್ಫೋಟವಾಗಿ ತಾಯಿ ಹಾಗೂ ಇಬ್ಬರು ಪುತ್ರಿಯರು ಸಜೀವ ದಹನವಾಗಿರುವ ಘಟನೆ ರಾಯಚೂರು ಜಿಲ್ಲೆಯ ಶಕ್ತಿನಗರದಲ್ಲಿ ಸೋಮವಾರ ವರದಿಯಾಗಿದೆ.

ತಾಯಿ ರಂಜಿತಾ (31), ಪುತ್ರಿಯರಾದ ಮೃದುಲಾ (13) ಮತ್ತು ತಾರುಣ್ಯಾ( 6) ಮೃತರು. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕೋಡಿಹಳ್ಳಿ ಗ್ರಾಮದ ಅವರ ಪತಿ ಆರ್‌ಟಿಪಿಎಸ್‌ನಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಆಗಿದ್ದಾರೆ ಎಂದು ಹೇಳಲಾಗಿದೆ.

'ಸೋಮವಾರ ಮಧ್ಯಾಹ್ನ ಸುಮಾರು 2: 45ಕ್ಕೆ ಘಟನೆ ನಡೆದಿದೆ. ಮಧ್ಯಾಹ್ನ  ಇಬ್ಬರು ಪುತ್ರಿಯರನ್ನು ಶಾಲೆಯಿಂದ ರಂಜಿತಾ ಮನೆಗೆ ಕರೆ ತಂದಿದ್ದಾರೆ. ಮನೆಯಲ್ಲಿ ಹೊಗೆ ಆವರಿಸಿದ್ದು ಕಂಡು ಜನರು ಮಾಹಿತಿ ನೀಡಿದ್ದಾರೆ. ತಕ್ಷಣ ಅಗ್ನಿಶಾಮಕ ಸಿಬ್ಬಂದಿ ನೆರವಿನಿಂದ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸಿದೆವು' ಎಂದು ಶಕ್ತಿನಗರ ಪೊಲೀಸರು ಮಾಹಿತಿ ನಿಡಿದರು. 

Similar News