''ಮಾಡಾಳ್ ವಿರೂಪಾಕ್ಷಪ್ಪ ಮಿಸ್ಸಿಂಗ್, ಹುಡುಕಿಕೊಡಿ...'': ಕಾಂಗ್ರೆಸ್ ನಿಂದ ಪೋಸ್ಟರ್ ಅಭಿಯಾನ
Update: 2023-03-07 10:31 IST
ಬೆಂಗಳೂರು: ಕೆಎಸ್‌ಡಿಎಲ್ ಟೆಂಡರ್ ಪ್ರಕ್ರಿಯೆಯಲ್ಲಿ ಲಂಚ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಬೆಂಗಳೂರು ಹಾಗೂ ದಾವಣಗೆರೆಯಲ್ಲಿ ಪೋಸ್ಟರ್ ಅಭಿಯಾನ ನಡೆಸಿದ್ದಾರೆ.
ದಾವಣಗೆರೆ ನಗರದ ಪ್ರಮುಖ ಬೀದಿಗಳಲ್ಲಿ ಮಿಸ್ಸಿಂಗ್ ಪೋಸ್ಟರ್ ಹಚ್ಚಿ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡಡಸಿದ್ದಾರೆ.
''ಮಾಡಾಳ್ ವಿರೂಪಾಕ್ಷಪ್ಪ ಕಾಣೆಯಾಗಿದ್ದಾರೆ. ಲೋಕಾಯುಕ್ತ ಪ್ರಕರಣದಲ್ಲಿ ತಲೆಮೆರೆಸಿಕೊಂಡಿರುವ ಎ1 ಆರೋಪಿಯನ್ನು ದಯಮಾಡಿ ಹುಡುಕಿ ಕೊಡಿ. ಕಂಡಲ್ಲಿ 100 ನಂಬರ್‌ಗೆ ಕರೆ ಮಾಡಿ'' ಎಂದು ಪೋಸ್ಟರ್ ಗಳಲ್ಲಿ ಬರೆಯಲಾಗಿದೆ.
ಬೆಂಗಳೂರು ನಗರದ ಯಶವಂತಪುರ ಬಸ್ ನಿಲ್ದಾಣ ಹಾಗೂ ದಾವಣಗೆರೆ ನಗರದ ಪ್ರಮುಖ ಬೀದಿಗಳಲ್ಲಿ ಪೋಸ್ಟರ್ ಗಳನ್ನು ಅಂಟಿಸಲಾಗಿದೆ.