ಹೊಳೆನರಸೀಪುರ: ರೌಡಿ ಶೀಟರ್‌ಗಳಿಗೆ ಸಾರ್ವಜನಿಕರಿಂದ ಥಳಿತ
ಹೊಳೆನರಸೀಪುರ, ಮಾ.7: ಕುಡಿದ ಅಮಲಿನಲ್ಲಿ ಜನರಿಗೆ ತೊಂದರೆ ಕೊಡುತ್ತಿದ್ದ ಮೂವರು ರೌಡಿಶೀಟರ್‌ಗಳಿಗೆ ಸಾರ್ವಜನಿಕರೇ ಥಳಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಎರಡು ಕೊಲೆ ಕೇಸ್‌ನಲ್ಲಿ ಆರೋಪಿಯಾಗಿದ್ದ ಯಾಚೇನಹಳ್ಳಿ ಚೇತು, ಉಲಿವಾಲ ಚೇತು ಮತ್ತು ನೈಂಟಿ ವಿಶ್ವ ಎಂಬವರು ಥಳಿತಕೊಳಗಾದವರು ಎಂದು ತಿಳಿದು ಬಂದಿದೆ. ನಾಲ್ಕು ದಿನದ ಹಿಂದೆ ತಾಲೂಕಿನ ಹಳ್ಳಿಮೈಸೂರು ಪೊಲೀಸ್ ಠಾಣೆ ವ್ಯಾಪ್ತಿಯ ಜೋಡಿ ಗುಬ್ಬಿಯ ಬಾರ್‌ವೊಂದರಲ್ಲಿ ಕುಡಿದು ಬಿಲ್ ಕೊಡದೆ ಬಾರ್ ಕ್ಯಾಷಿಯರ್ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದರು.ಕುಡಿದ ಅಮಲಿನಲ್ಲಿ ಜನರಿಗೆ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.
ಇವರ ಹುಚ್ಚಾಟದಿಂದ ರೋಸಿ ಹೋದ ಜನರು, ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅಷ್ಟೇ ಅಲ್ಲ, ಬಟ್ಟೆ ಬಿಚ್ಚಿ ರಸ್ತೆಯಲ್ಲಿ ಉರುಳಾಡಿಸಿ ಬಿಸಿ ಮುಟ್ಟಿಸಿದ್ದಾರೆ. ಈ ವೀಡಿಯೊ ಎಲ್ಲೆಡೆ ವೈರಲ್ ಆಗಿದೆ. ಬಾರ್ ಕ್ಯಾಷಿಯರ್ ದೂರು ಆಧರಿಸಿ ಮೂವರ ವಿರುದ್ಧ ಕೊಲೆಯತ್ನ ಕೇಸ್ ದಾಖಲಾಗಿದೆ. ಮೂವರನ್ನು ಬಂಧಿಸಿ ರಾಜ್ಯದ ಬೇರೆ ಬೇರೆ ಜೈಲಿಗೆ ಕಳಿಸಲಾಗಿದೆ.