ಮಕ್ಕಳನ್ನು ಹೊಂದಲೆಂದೇ ಮದುವೆಯಾಗಬೇಕೆ?: ಕಟೀಲ್ ವಿರುದ್ಧ ನಟ ಚೇತನ್ ಆಕ್ರೋಶ
Update: 2023-03-07 17:57 IST
ಬೆಂಗಳೂರು, ಮಾ. 7: ‘ಕೋವಿಡ್-19 ಲಸಿಕೆ ಪಡೆದರೆ ಮಕ್ಕಳಾಗದೆಂಬ ಸಿದ್ದರಾಮಯ್ಯರ ಮಾತು ಕೇಳಿ ಎಐಸಿಸಿ ಮುಖಂಡ ‘ರಾಹುಲ್ ಗಾಂಧಿ ಮದುವೆ ಆಗುತ್ತಿಲ್ಲ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವಹೇಳನಕಾರಿ ಹೇಳಿಕೆಗೆ ನಟ ಚೇತನ್ ಅಹಿಂಸಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಈ ಸಂಬಂಧ ಟ್ವೀಟ್ ಮಾಡಿರುವ ಚೇತನ್, ‘ಮಕ್ಕಳಾಗದ ಕಾರಣ ರಾಹುಲ್ ಗಾಂಧಿ ಮದುವೆಯಾಗುತ್ತಿಲ್ಲ’ ಎಂದು ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿಕೆ ನೀಡಿದ್ದಾರೆ. ಇದು ಅತ್ಯಂತ ಕೆಳಮಟ್ಟದ್ದು ಮತ್ತು ತರ್ಕವಿಲ್ಲದ ದೋಷಪೂರಿತ ಹೇಳಿಕೆ’ ಎಂದು ವಾಗ್ದಾಳಿ ನಡೆಸಿದ್ದಾರೆ.
‘ರಾಹುಲ್ ಗಾಂಧಿ ಅವರು ‘ನಿಜವಾದ ಪುರುಷನಿಗಿಂತ ಕಡಿಮೆ’ ಎಂದು ಬಿಂಬಿಸುವ ಪುರುಷ ಪ್ರಧಾನವಾದ ಈ ರೀತಿಯ ಪ್ರಚೋದನೆಯು ಅನುಚಿತವಾದದ್ದು. ಮಕ್ಕಳನ್ನು ಹೊಂದಲೆಂದೇ ಮದುವೆಯಾಗಬೇಕೆ?’ ಎಂದು ಕೇಳಿದ್ದಾರೆ.ಎಂದು ನಟ ಚೇತನ್ ಖಾರವಾಗಿ ಪ್ರಶ್ನಿಸಿದ್ದಾರೆ.
— Chetan Kumar Ahimsa / ಚೇತನ್ ಅಹಿಂಸಾ (@ChetanAhimsa) March 6, 2023