×
Ad

ಮಂಡ್ಯದಲ್ಲಿ ಮೋದಿ 'ಶೋ'ಕಿಗಾಗಿ ನೆರಳು, ಗಾಳಿ ನೀಡುವ ಮರಗಳ ಮಾರಣಹೋಮ: ಕಾಂಗ್ರೆಸ್ ಆಕ್ರೋಶ

''ಬಿಜೆಪಿಯ ಪರಿಸರ ಪ್ರೇಮ ಈಗ ಎಲ್ಲಿ ಹೋಗಿದೆ?''

Update: 2023-03-08 15:57 IST

ಬೆಂಗಳೂರು: ಮಾರ್ಚ್ 12ರಂದು ಬೆಂಗಳೂರು-ಮೈಸೂರು ಹೈವೇ ಲೋಕಾರ್ಪಣೆಗೆ ನರೇಂದ್ರ ಮೋದಿ ಆಗಮಿಸುತ್ತಿದ್ದು, ಇದಕ್ಕಾಗಿ ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿ ಬದಿಯ ಮರಗಳ ಮಾರಣಹೋಮ ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. 

ಈ ಕುರಿತು ಬುಧವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, 'ಮೋದಿ 'ಶೋ'ಕಿಗಾಗಿ ನೆರಳು, ಗಾಳಿ ನೀಡುವ ಮರಗಳ ಮಾರಣಹೋಮ ನಡೆದಿದೆ. ಬಿಜೆಪಿಯ ಒಂದು ದಿನದ ಪ್ರಚಾರದ ಜಾತ್ರೆಗಾಗಿ ದಶಕಗಳಿಂದ ಬೆಳೆದ ಮರಗಳನ್ನು ಕಡಿದ #40PercentSarkara ನಿರ್ಲಜ್ಜತನದ ಪರಮಾವಧಿಗೆ ತಲುಪಿದೆ' ಎಂದು ಕಿಡಿಕಾರಿದೆ.

'ರೆಂಬೆಗಳ ನೆಪದಲ್ಲಿ ಅರ್ಧ ಮರವನ್ನೇ ಕಡಿಯಲಾಗಿದೆ. ಹಿಂದೆ ಸ್ಟೀಲ್ ಬ್ರಿಡ್ಜ್ ಸಂದರ್ಭದಲ್ಲಿದ್ದ ಬಿಜೆಪಿಯ ಪರಿಸರ ಪ್ರೇಮ ಈಗ ಎಲ್ಲಿ ಹೋಗಿದೆ?' ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ. 

ಮಾ. 12ಕ್ಕೆ ಮದ್ದೂರು ತಾಲೂಕಿನ ಗೆಜ್ಜಲಗೆರೆ ಬಳಿ ಮೋದಿ ದಶಪಥ ಹೆದ್ದಾರಿ ಉದ್ಘಾಟಿಸಲಿದ್ದಾರೆ. ನಂತರ ನಗರದ ಪ್ರವಾಸಿ ಮಂದಿರದಿಂದ ಕೆಂಪೇಗೌಡ ಉದ್ಯಾನದವರೆಗಿನ 1.5 ಕಿ.ಮೀ ರೋಡ್‌ ಶೋ ನಡೆಸಲಿದ್ದಾರೆ.

Similar News