×
Ad

ಕೇಂದ್ರ ಸರಕಾರ ಆರೋಗ್ಯ ಕ್ಷೇತ್ರಕ್ಕೆ ಕನಿಷ್ಠ ಶೇ10ರಷ್ಟು ಅನುದಾನ ನೀಡಬೇಕು: ಕೆ.ಕೆ.ಶೈಲಜಾ

Update: 2023-03-08 17:46 IST

ತುಮಕೂರು.ಮಾ.08: ಜನ ಸಾಮಾನ್ಯರ  ಆರೋಗ್ಯದ ಬಗ್ಗೆ ಗಮನ ನಿಡುವುದು  ಮತ್ತು  ಕಾಪಾಡುವುದು  ಸರಕಾರಗಳ  ಕರ್ತವ್ಯವಾಗಬೇಕು, ಕೇಂದ್ರ ಸರಕಾರ  ಆರೋಗ್ಯ ಕ್ಷೇತ್ರಕ್ಕೆ ಕನಿಷ್ಠ ಶೇ10ರ ಅನುದಾನ ನೀಡಿ ಈ ಕ್ಷೇತ್ರವನ್ನು ಬಲಿಷ್ಠಗೊಳಿಸುವ ಅಗತ್ಯವಿದೆ ಎಂದು ಕೇರಳ ರಾಜ್ಯದ ಮಾಜಿ ಆರೋಗ್ಯ ಸಚಿವೆ ಹಾಗೂ ಶಾಸಕಿ ಕೆ.ಕೆ.ಶೈಲಜಾ ಪ್ರತಿಪಾದಿಸಿದ್ದಾರೆ.

ನಗರದ ಜನಚಳವಳಿ ಕೇಂದ್ರದಲ್ಲಿ ಸಿಪಿಐ(ಎಂ) ಪಕ್ಷದವತಿಯಿಂದ ಆಯೋಜಿಸಿದ್ದ ಜನರ ಆರೋಗ್ಯ ಮತ್ತು ಸರಕಾರದ ಹೊಣೆಗಾರಿಕೆಗಳು ಎಂಬ ವಿಷಯ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತಿದ್ದ ಅವರು,ಸರಕಾರಿ ಆರೋಗ್ಯ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಗಳು ಅಗತ್ಯವಿದೆ.ಖಾಸಗೀಕರಿಸಲು ಕೇಂದ್ರ ಮತ್ತು ರಾಜ್ಯ ಸರಕಾರಗಳ ಮೇಲೆ    ಒತ್ತಡ  ಹೇರದೆ  ಆರೋಗ್ಯವನ್ನು  ಸಾರ್ವಜನಿಕ  ಕ್ಷೇತ್ರದಲ್ಲಿ  ಉಳಿಸಿ  ಬಳಿಷ್ಟಗೊಳಿಸುವುದರ ಅಗತ್ಯವಿದೆ ಎಂದರು.

ಕೇಂದ್ರ ಸರಕಾರ ತನ್ನ ಬಜೆಟ್‍ನಲ್ಲಿ ಶೇ 1% ಮಾತ್ರ  ಅರೋಗ್ಯ ಕ್ಷೇತ್ರಕ್ಕೆ  ವಿನಿಯೋಗಿಸುತ್ತಿದೆ. ಅನಿರ್ವಾಯವಾಗಿ  ರಾಜ್ಯ ಸರಕಾರಗಳು ವಿವಿಧ  ಹಣ ಕಾಸು ಸಂಸ್ಥೆಗಳಿಂದ  ಸಾಲ  ಪಡೆದು ಆಸ್ಪತ್ರೆಗಳ ಉನ್ನತೀಕರಣಕ್ಕೆ ಮುಂದಾಗುವಂತ  ಸ್ಥಿತಿ ಇದೆ ಯಾವುದೇ ಸಾಂಕ್ರಾಮಿಕ ರೋಗ  ಆರಂಭಿಕ ಹಂತದಲ್ಲಿ ಸೋಂಕಿತರನ್ನು  ಗುರುತಿಸಿ,ಅವರಿಗೆ ಸೂಕ್ತ ಚಿಕಿತ್ಸೆ, ಜೊತೆ  ಸರಕಾರ ಮುನ್ನೆಚ್ಚರಿಕೆ,ಪರಿಸ್ಥಿತಿಯನ್ನು ಎದುರಿಸಲು  ಬೇಕಾದ ಯೋಜನಾ ಬದ್ದ ಸಿದ್ದತೆಯ ಜೊತೆಗೆ,ಖಾಸಗಿ ಕ್ಷೇತ್ರದವು ಕೈ ಜೋಡಿಸಿದ ಕಾರಣ ಪರಿಸ್ಥಿತಿಯನ್ನು  ಉತ್ತಮವಾಗಿ ನಿಭಾಯಿಸಲು ಸಾಧ್ಯವಾಯಿತು ಎಂದು ಕೆ.ಕೆ.ಶೈಲಜಾ ತಿಳಿಸಿದರು.

ಜಗತ್ತಿನಲ್ಲಿ ಬಂಡವಾಳ ಶಾಹಿ ದೇಶಗಳು ಲಾಭಕ್ಕೆ ಮಾತ್ರ ಪ್ರಾಧನ್ಯತೆ  ನೀಡುವಾಗಲೆ,ಸಮಾಜವಾದಿ ಕ್ಯೂಬಾ  ಮೂರನೇ  ಜಗತ್ತಿನ ದೇಶಗಳಿಗೆ  ನೆರವು ನೀಡುತ್ತಿತ್ತು.ಕಮ್ಯುನಿಷ್ಟ್ ಚಿಂತನೆಗಳು ಸದಾ ಜನ ಪರ  ಹಾಗಾಗಿ ಜನತೆ ಕಮ್ಯುನಿಷ್ಟ್ ಪಕ್ಷವನ್ನು  ಬೇಂಬಲಿಸುವಂತೆ ಮನವಿ ಮಾಡಿದರು
ನಿವೃತ್ತ  ವೈದ್ಯಾಧಿಕಾರಿಗಳಾದ ಡಾ; ರಂಗಸ್ವಾಮಿ ಮಾತನಾಡಿ,ದೇಶದಲ್ಲಿ   ಆರೋಗ್ಯ ಕಾರ್ಯಕತೇಯರು   ಸಮುದಾಯದ  ಮಟ್ಟದಲ್ಲಿ ಕೆಲಸ ಮಾಡುವಂತೆ ಸರಕಾರಗಳು ಗÀಮನ  ಗರಿಸಬೆಕು  3-4 ರಾಜ್ಯಗಳಲ್ಲಿ ಮಾತ್ರ  ಈ ವ್ಯವಸ್ಥೆಇದೆ ನೀತಿ-ಯೋಜನಾ ಹಂತದಲ್ಲೆ  ಇದನ್ನು  ಒಳಗೋಳ್ಳಬೇಕಾದ ಅಗತ್ಯವಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಿಪಿಐ[ಎಂ]ರಾಜ್ಯ ಕಾರ್ಯಧರ್ಶಿ ಮಂಡಳಿ ಸದಸ್ಯ ಸೈಯದ್ ಮುಜೀಬ್ ಮಾತನಾಡಿ,ಅರೋಗ್ಯವೆಂದರೆ  ದೈಹಿಕ,ಮಾನಸಿಕ ಮತ್ತು ಆರ್ಥಿಕ, ಸಾಮಾಜಿಕ ಆರೋಗ್ಯವಾಗಿದೆ.ಆದರೂ ಸಾಮಾಜಿಕ ಆರೋಗ್ಯ ಹದೆಗಡಿಸುವ ಶಕ್ತಿಗಳಿಗೆ ಸರಕಾರ ಬೆಂಬಲಿಸುವತ್ತಿರುವುದು ವಿರ್ಪಯಾಸ ಎಂದರು

ಸಂವಾದದಲ್ಲಿ ಪರಿಸರವಾದಿ ಸಿ.ಯತಿರಾಜು,ಪ್ರಗತಿ ಪರ ಚಿಂತಕ.ಪ್ರೊ.ಕೆ.ದೂರೈರಾಜು,ಪಂಡಿತ್ ಜವಹರ್,ಸ್ಲಂ ಜನಾಂದೋಲದ  ಎ.ನರಸಿಂಹಮೂರ್ತಿ,ಕೆರಳ ಸಮಾಜ  ಜಾಯ್ ಕುಟ್ಟಿ,ಸಿಪಿಐ ಜಿಲ್ಲಾ ಕಾರ್ಯದರ್ಶಿ ಎನ್.ಕೆ. ಸುಬ್ರಮಣ್ಯ,ನಗರ  ಕಾರ್ಯದರ್ಶಿ ಲೋಕೇಶ್, ಖಲೀಲ್  ಮತ್ತಿತರರು ಉಪಸ್ಥಿತರಿದ್ದರು.

Similar News