ಬೆಳಗಾವಿ | ಜಮೀನಿನಲ್ಲಿ ವಿಚಿತ್ರ ಬಲೂನ್ ಪತ್ತೆ: ಗ್ರಾಮಸ್ಥರಲ್ಲಿ ಕುತೂಹಲ

Update: 2023-03-09 11:51 GMT

ಬೆಳಗಾವಿ, ಮಾ.9:  ಜಿಲ್ಲೆಯ ಬೈಲಹೊಂಗಲ ತೂಲೂಕಿನ ಬಾಗೇವಾಡಿ ಸಮೀಪದ  ಗದ್ದಿನಕರಿವಿನಕೊಪ್ಪ ಗ್ರಾಮದ ಹೊಲದಲ್ಲಿ ಗುರುವಾರ ವಿಚಿತ್ರವಾದ  ಬಲೂನ್ ಬಂದು ಪತ್ತೆಯಾಗಿದ್ದು, ಗ್ರಾಮಸ್ಥರಲ್ಲಿ ಕುತೂಹಲ ಮೂಡಿಸಿತು.

ಈ ಬಲೂನ್ ನಲ್ಲಿ ಎಲೆಕ್ಟ್ರಾನಿಕ್ ವಸ್ತುಗಳು ಇರುವುದರಿಂದ ಗೊಂದಲಕ್ಕೆ ಒಳಗಾದ ಜನ ತಕ್ಷಣ ಪೊಲೀಸರಿಗೆ ಕರೆ ಮಾಡಿದರು. ಸ್ಥಳಕ್ಕೆ ಪೊಲೀಸರು ಧಾವಿಸಿ ಬಂದು ಪರಿಶೀಲಿಸಿದ ಬಳಿಕ ಬೆಳಗಾವಿಯ ವಿಜ್ಞಾನ ಕೇಂದ್ರಕ್ಕೆ ತಂದು ಪರಿಶೀಲನೆ ನಡೆಸಿದರು. 

''ಇದು ಎತ್ತರದ ಪ್ರದೇಶದಲ್ಲಿ ಹವಾಮಾನ ಪರಿಸ್ಥಿತಿ ಪರಿಶೀಲನೆಗಾಗಿ ಬಳಸುವ ಸಾಧನವಾಗಿದೆ. ಹೀಗಾಗಿ  ಇದರ ಬಗ್ಗೆ ಯಾರೂ ಆತಂಕ ಪಡಬೇಕಾಗಿಲ್ಲ. ಊಹಾಪೋಹಗಳಿಗೆ ಕಿವಿಗೊಡಬಾರದು'' ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಂಜೀವ್ ಪಾಟೀಲ ಸ್ಪಷ್ಟಪಡಿಸಿದರು.

Similar News